Advertisement
ನಂಜನಗೂಡು ತಾಲೂಕಿನ ಚಿಲಕ್ಕಹಳ್ಳಿಯಲ್ಲಿ ಆಹಾರ ಅರಿಸಿ ಬಂದ ಮತ್ತೂಂದು ಚಿರತೆ ಬೋನ್ನಲ್ಲಿ ಸೆರೆ ಸಿಕ್ಕಿದೆ. ಈ ನಡುವೆ, ನಾಗರಹೊಳೆ ಉದ್ಯಾನದಲ್ಲಿ ಸಲಗವೊಂದು ಸಿಕ್ಕಾಪಟ್ಟೆ ದಾಂಧಲೆ ನಡೆಸಿ ಜಮೀನಿನಲ್ಲಿ ಬೆಳೆಗಳನ್ನು ಧ್ವಂಸಗೊಳಿಸಿದೆ.
Related Articles
Advertisement
ಇದನ್ನು ಕಂಡ ರೈತರು ಸಲಗವನ್ನು ಬೆದರಿಸುತ್ತಿದ್ದಂತೆ ಅಲ್ಲಿಂದ ಕಾಲ್ಕಿತ್ತ ಸಲಗವು, ವೀರನಹೊಸಳ್ಳಿ ಗ್ರಾಮದತ್ತ ತೆರಳಿ ಗ್ರಾಮದ ಚೌಡಮ್ಮ ಅವರಿಗೆ ಸೇರಿದ ಕೊಟ್ಟಿಗೆ ಮತ್ತು ಮನೆಯ ಕಾಂಪೌಂಡ್, ಮೇಲ್ಛಾವಣಿ ಕೆಡವಿ ಹಾಕಿ, ಕೊಟ್ಟಿಗೆಯಲ್ಲಿದ್ದ ಹಸುವಿನ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ. ವೀರನಹೊಸಹಳ್ಳಿಯ ಅರಣ್ಯ ಇಲಾಖೆ ಸಿಬ್ಬಂದಿ ವಸತಿಗೃಹದ ಕಾಂಪೌಂಡ್ ಮತ್ತು ಗೇಟ್ ಮುರಿದು ಹಾಕಿದೆ. ಉದ್ಯಾನದಿಂದ ಒಟ್ಟು 9 ಆನೆಗಳ ಹಿಂಡು ನಾಗಾಪುರ ಕೇಂದ್ರದ ಬಳಿ ಮುರಿದಿದ್ದ ರೈಲ್ವೆ ಹಳಿ ಬೇಲಿ ದಾಟಿ ಹೊರಬಂದಿದ್ದವು.
ತಕ್ಷಣವೇ ಅರಣ್ಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಉದ್ಯಾನ ಸೇರಿಸುವಲ್ಲಿ ಯಶಸ್ವಿಯಾದರೂ ಒಂದು ಸಲಗ ಮಾತ್ರ ತಪ್ಪಿಸಿಕೊಂಡು ನಾಗಾಪುರ ಶಾಲೆ ಬಳಿಯ ವುಡ್‌ಲಾಟ್ ಸೇರಿಕೊಂಡಿತ್ತು. ನಂತರ ಎಲ್ಲೆಡೆ ಅವಾಂತರ ಸೃಷ್ಟಿಸಿ, ಹಾನಿ ಮಾಡಿದ್ದ ಸಲಗವನ್ನು ಕೊನೆಗೆ ಗ್ರಾಮಸ್ಥರ ಸಹಕಾರದೊಂದಿಗೆ ಉದ್ಯಾನ ಸೇರಿಸುವಲ್ಲಿ ಯಶಸ್ವಿಯಾಗಿ ನಿಟ್ಟುಸಿರು ಬಿಟ್ಟರು.
ವಿಷಯ ತಿಳಿದು ಹೆಚ್ಚಿನ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪಟಾಕಿ ಸಿಡಿಸಿ, ಅಕ್ಕಪಕ್ಕದ ಗ್ರಾಮಸ್ಥರ ನೆರವಿನಿಂದ ಸಲಗವನ್ನು ವೀರನಹೊಸಳ್ಳಿ ಮುಖ್ಯದ್ವಾರದ ಮೂಲಕ ಕಾಡಿಗೆ ಅಟ್ಟಲಾಯಿತು. ಕಾರ್ಯಾಚರಣೆಯಲ್ಲಿ ವೀರನಹೊಸಹಳ್ಳಿ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ವೀರನಹೊಸಳ್ಳಿ ವಲಯ ಅರಣ್ಯಾಧಿಕಾರಿ ನಮನ್ ನಾರಾಯಣ ನಾಯಕ್, ಡಿಆರ್‌ಎಫ್‌ಒಗಳಾದ ಚಂದ್ರೇಶ್. ದ್ವಾರಕನಾಥ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.