Advertisement

ಐಟಿ ವಲಯದಲ್ಲಿ 2 ಲಕ್ಷ ಹೊಸ ಉದ್ಯೋಗ ಸೃಷ್ಟಿ : ರವಿ ಶಂಕರ್ ಪ್ರಸಾದ್

05:19 PM Mar 18, 2021 | Team Udayavani |

ನವ ದೆಹಲಿ : ದೇಶದ ಜಿಡಿಪಿಗೆ ಐಟಿ ವಲಯ ಶೇ. 8ರಷ್ಟು ಕೊಡುಗೆಯನ್ನು ನೀಡಿದೆ. 2019 ರಿಂದ ಐಟಿ ವಲಯದಲ್ಲಿ 2 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಿದೆ ಎಂದು ರಾಜ್ಯ ಸಭೆಯಲ್ಲಿ ಇಂದು(ಗುರುವಾರ, ಮಾ.18) ಮಾಹಿತಿ ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ.

Advertisement

ಭಾರತದ ಹಳ್ಳಿ ಹಳ್ಳಿಗಳಲ್ಲಿ ಭಾರತ್ ನೆಟ್(Bharat Broadband Network)ನನ್ನು ಅಳವಡಿಸಲು ಸರ್ಕಾರ ಉದ್ದೇಶಿಸಿದೆ. ಮುಂಬರುವ 1000 ದಿನಗಳಲ್ಲಿ ಇದು ಪೂರ್ಣಗೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಬಯಸುತ್ತಾರೆ ಎಂದು ಪ್ರಸಾದ್ ತಿಳಿಸಿದ್ದಾರೆ.

ಓದಿ : ತಮಿಳುನಾಡು ಚುನಾವಣೆ: ಅಣ್ಣಾಮಲೈ ನಾಮಪತ್ರ ಸಲ್ಲಿಕೆ, ತೇಜಸ್ವಿ ಸೂರ್ಯ, ಮುನಿರತ್ನ ಸಾಥ್

ಡಿಜಿಟಲ್ ಇಂಡಿಯಾದ ಮೂಲಕ ಭಾರತ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಪ್ರಶ್ನಾವಳಿ ಸಮಯದಲ್ಲಿ ಪ್ರಸಾದ್ ಹೇಳಿದ್ದಾರೆ.

ಐಟಿ ವಲಯವು ಶೇ. 8 ರಷ್ಟು ದೇಶದ ಜಿಡಿಪಿಗೆ ಕೊಡುಗೆ ನೀಡಿದೆ. ಐಟಿ ವಲಯದಲ್ಲಿ 14 ಲಕ್ಷ ಮಹಿಳೆಯರನ್ನು ಒಳಗೊಂಡು 46 ಲಕ್ಷ ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2019 ರಿಂದ 2 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಿದೆ ಎಂದು ಪ್ರಸಾದ್ ತಿಳಿಸಿದ್ದಾರೆ.

Advertisement

ಕೋವಿಡ್ ಸಾಂಕ್ರಾಮಿಕ ಸೋಂಕಿನ ಸಂದರ್ಭದಲ್ಲಿಯೂ ಸಹ ಆನ್ ಲೈನ್ ಶಿಕ್ಷಣ ಯಶಸ್ವಿಯಾಗಿದೆ ಎನ್ನುವುದು ದೃಢವಾಗಿದೆ. ಇನ್ನು, ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗಳು ಕೋವಿಡ್ ಸಂದರ್ಭದಲ್ಲಿ 70 ಲಕ್ಷ ಪ್ರಕರಣಗಳನ್ನು ಡಿಜಿಟಲ್ ಮಾದರಿಯಲ್ಲಿ ವಿಚಾರಣೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.

ಐಟಿ ಕ್ಷೇತ್ರದ ಹೊಸ ಬೆಳವಣಿಗೆಗಳನ್ನು ಎತ್ತಿ ತೋರಿಸಿದ ಅವರು, ಡಿಜಿಟಲ್ ಪಾವತಿಗಳನ್ನು ಮಾಡುವಲ್ಲಿ ಯುಪಿಐನಲ್ಲಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸಾಧನೆ ಮಾಡಿದ ದೇಶವಾಗಿದೆ ಎಂದರು.

1000 ದಿನಗಳಲ್ಲಿ ದೇಶದ ಬಹುತೇಕ ಎಲ್ಲಾ ಹಳ್ಳಿಗಳಿಗೂ ಭಾರತ್ ನೆಟ್ ನನ್ನು ಅಳವಡಿಸುವ ಯೋಜನೆಯನ್ನು ಸರ್ಕಾರ ಯೋಜಿಸಿದೆ. ಇದರಿಂದ ಸ್ಥಳೀಯ ಶಾಲೆಗಳಿಗೆ ಡಿಜಿಟಲ್ ವಿಷಯಗಳನ್ನು ನೀಡಲು ಅವಕಾಶ ಒದಗಿಸುತ್ತದೆ ಎಂದರು.

ಓದಿ : ಬೆಳಗಾವಿಯ ಒಂದಿಂಚೂ ಮಹಾರಾಷ್ಟ್ರಕ್ಕೆ ಬಿಟ್ಟು ಕೊಡುವ ಪ್ರಶ್ನೆಯಿಲ್ಲ: ಜಿ.ಸಿ ಚಂದ್ರಶೇಖರ್

 

Advertisement

Udayavani is now on Telegram. Click here to join our channel and stay updated with the latest news.

Next