Advertisement

ಸ್ಟೇಶನರಿ ಅಂಗಡಿ-ಮನೆಯಲ್ಲಿ ಬೆಂಕಿ: ತಾಯಿ, ಮಗಳ ಸಾವು

11:52 AM Feb 15, 2018 | Team Udayavani |

ಥಾಣೆ : ನವೀ ಮುಂಬಯಿಯ ಐರೋಳಿ ಪ್ರದೇಶದಲ್ಲಿನ ಸ್ಟೇಶನರಿ ಅಂಗಡಿ-ಮನೆಯಲ್ಲಿ  ಇಂದು ನಸುಕಿನ ವೇಳೆ ಬೆಂಕಿ ಅವಘಡ ಉಂಟಾಗಿ ಮಹಿಳೆ ಮತ್ತು ಆಕೆಯ ಐದು ವರ್ಷದ ಮಗಳು ಸಜೀವ ದಹನಗೊಂಡು ಮೃತಪಟ್ಟರೆಂದು ಅಗ್ನಿ ಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ. 

Advertisement

ಸ್ಟೇಶನರಿ ಶಾಪ್‌ನಲ್ಲಿ  ನಸುಕಿನ 4 ಗಂಟೆಯ ವೇಳೆಗೆ ಬೆಂಕಿ ಅವಘಡ ಸಂಭವಿಸಿತು.ಅಂಗಡಿ ಮತ್ತು ಮನೆ ಒಟ್ಟಿಗೇ ಇದ್ದುರಿಂದ ತಾಯಿ, ಮಗಳು ಸುಟ್ಟು ಕರಕಲಾದರು ಎಂದು ಐರೋಳಿ ಫೈರ್‌ ಸ್ಟೇಶನ್‌ ಪ್ರಭಾರಾಧಿಕಾರಿ ಏಕನಾಥ್‌  ಪವಾರ್‌ ತಿಳಿಸಿದ್ದಾರೆ. 

ಅಂಗಡಿಗೆ ಒಳಗಿನಿಂದ ಲಾಕ್‌ ಮಾಡಲಾಗಿತ್ತು; ಹಾಗಾಗಿ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಲು ಅಂಗಡಿ  ಬಾಗಿಲನ್ನು ಒಡೆದು ಒಳ ಪ್ರವೇಶಿಸಬೇಕಾಯಿತು.

ತಾಯಿ ಮಂಜು ಚೌಧರಿ 28 ಮತ್ತು ಮಗಳು ಗಾಯತ್ರಿ ಚೌಧರಿ 5 ಮೃತಪಟ್ಟವರು. ಅಂಗಡಿ ಮಾಲಕ, ಆತನ ಸಹೋದರ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಬೆಂಕಿ ಅವಘಡದಿಂದ ಪಾರುಗೊಳಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next