Advertisement

ಉತ್ತರ ಪ್ರದೇಶದಲ್ಲಿ ಮನೆಗೆ ಬೆಂಕಿ : ಅಣ್ಣ –ತಂಗಿ ಸುಟ್ಟು ಕರಕಲು

12:27 PM Apr 12, 2017 | Team Udayavani |

ಬಂಡಾ, ಉತ್ತರ ಪ್ರದೇಶ: ಇಲ್ಲಿನ ನಿಮ್ಮಿಪುರ ಪ್ರದೇಶದಲ್ಲಿನ ಮನೆಯೊಂದು ಬೆಂಕಿಗೆ ಆಹುತಿಯಾದ ಭೀಕರ ಘಟನೆಯಲ್ಲಿ ಅಣ್ಣ – ತಂಗಿ ಸುಟ್ಟು ಕರಕಲಾಗಿದ್ದು ಇತರ ಮೂವರು ಗಂಭೀರವಾಗಿ ಸುಟ್ಟ ಗಾಯಗಳಿಗೆ ಗುರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

ಸ್ಥಳದಲ್ಲೇ ಮೃತಪಟ್ಟ ಅಣ್ಣ ಮತ್ತು ತಂಗಿಯನ್ನು ರಿಜ್ವಾನ್‌ (17) ಮತ್ತು ಸರೋಜಾ (10) ಎಂದು ಗುರುತಿಸಲಾಗಿದೆ. ಇದೇ ದುರಂತದಲ್ಲಿ ಒಬ್ಬ ವ್ಯಕ್ತಿ ಮತ್ತು ಆತನ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮನೆ ಬೆಂಕಿಗೆ ಆಹುತಿಯಾಗಲು ಏನು ಕಾರಣ ಎಂದು ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next