Advertisement

ನೇಪಾಲದ ಮೂಲಕ ಉತ್ತರ ಪ್ರದೇಶಕ್ಕೆ ಎಂಟ್ರಿ ಕೊಟ್ಟರೇ ಐಸಿಸ್ ಉಗ್ರರು?

09:55 AM Jan 06, 2020 | Hari Prasad |

ನವದೆಹಲಿ: ವಿಧ್ವಂಸಕ ಕೃತ್ಯಗಳಲ್ಲಿ ತರಬೇತು ಹೊಂದಿದ ಕನಿಷ್ಠ ಐವರು ಐಸಿಸ್ ಉಗ್ರರು ನೇಪಾಲ ಮೂಲಕ ಉತ್ತರ ಪ್ರದೇಶಕ್ಕೆ ಬಂದಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಗುಪ್ತಚರ ಇಲಾಖೆ ಹೊರಗೆಡಹಿದೆ.

Advertisement

ಗುಪ್ತಚರ ಇಲಾಖೆಯ ಈ ಎಚ್ಚರಿಕೆಯ ಬೆನ್ನಲ್ಲೇ ರಾಜ್ಯದ ಬಸ್ತಿ, ಗೋರಖ್ ಪುರ, ಸಿದ್ಧಾರ್ಥನಗರ, ಕುಶಿನಗರ ಮತ್ತು ಮಹಾರಾಜಗಂಜ್ ಭಾಗಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಮತ್ತು ರಾಜ್ಯಾದ್ಯಂತ ಭದ್ರತೆಯನ್ನು ಗರಿಷ್ಠ ಮಟ್ಟದಲ್ಲಿ ವ್ಯವಸ್ಥೆಗೊಳಿಸಲಾಗಿದೆ.

ಇಬ್ಬರು ಐಸಿಸ್ ಉಗ್ರರು ದೇಶವನ್ನು ಪ್ರವೇಶಿದ್ದಾರೆ ಮತ್ತು ಸದ್ಯಕ್ಕೆ ಅವರು ಉತ್ತರ ಪ್ರದೇಶದಲ್ಲಿದ್ದಾರೆ ಎಂಬ ಮಾಹಿತಿ ಪೊಲೀಸ್ ಇಲಾಖೆಗೆ ಲಭಿಸಿರುವುದನ್ನು ಬಸ್ತಿ ಐಜಿ ಅಶುತೋಷ್ ಕುಮಾರ್ ಅವರು ಖಚಿತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next