ಇಂಡೋನೇಷ್ಯಾ: ಇಂಡೋನೇಷ್ಯಾದ Kepulauan ಬಟುದಲ್ಲಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ (EMSC) ತಿಳಿಸಿದೆ.
Advertisement
ರವಿವಾರ ಬೆಳಿಗ್ಗೆ ಸುಮಾರು 6 ತೀವ್ರತೆಯ ಸತತ ಎರಡು ಭೂಕಂಪನ ಸಂಭವಿಸಿದ್ದು, ಮೊದಲ ಭೂಕಂಪನದ ತೀವ್ರತೆ 6.1ರಷ್ಟು ಆಗಿತ್ತು. ಕೆಲವೇ ಗಂಟೆಗಳಲ್ಲಿ ಮತ್ತೊಮ್ಮೆ 5.8ರಷ್ಟು ತೀವ್ರತೆಯ ಭೂಕಂಪ ಕಂಪಿಸಿದೆ.
ಮೊದಲ ಭೂಕಂಪವು 43 ಕಿಮೀ (26.72 ಮೈಲುಗಳು) ಆಳದಲ್ಲಿದ್ದರೆ ಎರಡನೆಯದು 40 ಕಿಮೀ (24.85 ಮೈಲುಗಳು) ನಲ್ಲಿತ್ತು ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನ ಕೇಂದ್ರ ಹೇಳಿದೆ.