ನ್ಯೂಯಾರ್ಕ್: ಹಾಲಿ ವರ್ಷಕ್ಕಾಗಿನ ಜಗತ್ತಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿಯನ್ನು ಫೋರ್ಬ್ಸ್ ಪ್ರಕಟಿಸಿದೆ. ಅದರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಒಂಭತ್ತನೇ ಸ್ಥಾನದಲ್ಲಿದ್ದಾರೆ. ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಝಕರ್‌ಬರ್ಗ್ (13ನೇ ಸ್ಥಾನ), ಯುನೈಟೆಡ್ ಕಿಂಗ್‌ಡಮ್ ಪ್ರಧಾನಿ ಥೆರೇಸಾ ಮೇ (14), ಚೀನಾ ಪ್ರಧಾನಿ ಲಿ ಕೆಕಿಯಾಂಗ್ (15) ಮತ್ತು ಆ್ಯಪಲ್ ಸಿಇಒ ಟಿಮ್ ಕುಕ್ (24ನೇ ಸ್ಥಾನ)ಗಿಂತ ಅಗ್ರ ಸ್ಥಾನದಲ್ಲಿದ್ದಾರೆ. ಇದುವರೆಗೆ ಮೊದಲ ಸ್ಥಾನದಲ್ಲಿದ್ದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸ್ಥಾನದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇದ್ದಾರೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಲಿ ಪಟ್ಟಿಯಲ್ಲಿ ದ್ವಿತೀಯ ಸ್ಥಾನಿಯಾಗಿದ್ದಾರೆ. ಪ್ರಧಾನಿ ಮೋದಿ ಸೇರಿದಂತೆ ಮೊದಲ ಪಂಕ್ತಿಯ ಹತ್ತು ಸ್ಥಾನದಲ್ಲಿರುವವರು ವಿಶ್ವವನ್ನೇ ಬದಲಾ ಯಿಸ ಬಲ್ಲವರು ಎಂದು ಫೋರ್ಬ್ಸ್ ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (3), ಜರ್ಮನಿಯ ಚಾನ್ಸಲರ್ ಆ್ಯಂಜೆಲಾ ಮರ್ಕೆಲ್ (4), ಅಮೆಜಾನ್ ಸಿಇಒ ಜೆಫ್ ಬೆಜೋಸ್ (5), ಪೋಪ್ ಫ್ರಾನ್ಸಿಸ್ (6), ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್‌ಗೇಟ್ಸ್ (7), ಸೌದಿ ಅರೇಬಿ ಯಾದ ಯುವರಾಜ (8), ಗೂಗಲ್‌ನ ಲಾರಿ ಪೇಜ್ (9)ನೇ ಅಗ್ರ ಪಂಕ್ತಿಯಲ್ಲಿರುವವರು.
ಪ್ರಧಾನಿ ಮೋದಿ ಬಗ್ಗೆ ಪ್ರಸ್ತಾಪಿಸಿರುವ ಫೋರ್ಬ್ಸ್ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ತಡೆಯಲು 2016ರ ನ.8ರಂದು ಕೈಗೊಂಡ ನೋಟು ಅಮಾನ್ಯ ನಿರ್ಧಾರ ಕೈಗೊಂಡರು. ಅಮೆರಿಕ ಮತ್ತು ಚೀನಾಗಳಿಗೆ ಭೇಟಿ ನೀಡಿ ಅಲ್ಲಿನ ಅಧ್ಯಕ್ಷರಾದ ಟ್ರಂಪ್, ಕ್ಸಿ ಜಿನ್ ಪಿಂಗ್‌ರನ್ನು ಭೇಟಿಯಾಗುವ ಮೂಲಕ ವಿಶ್ವದ ನಾಯಕರ ಸಾಲಿಗೆ ಸೇರಿದ್ದಾರೆ. ಅಂತಾ ರಾಷ್ಟ್ರೀಯ ಹವಾಮಾನ ಬದಲಾವಣೆಯ ವಿಚಾರದಲ್ಲಿಯೂ ಭಾರತದ ಪ್ರಧಾನಿ ಗಮನಾರ್ಹ ಪಾತ್ರ ವಹಿಸಿದ್ದಾರೆಂದು ಹೇಳಿದೆ ಫೋರ್ಬ್ಸ್.
ಪಟ್ಟಿಯಲ್ಲಿರುವ ಇತರ ಭಾರತೀಯ ವ್ಯಕ್ತಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ 32ನೇ ಸ್ಥಾನದಲ್ಲಿದ್ದಾರೆ. ಜಿಯೋ ಎಂಬ ಹೊಸ 4ಜಿ ನೆಟ್‌ವರ್ಕ್ ಅನ್ನು 2016ರಲ್ಲಿ ಆರಂಭಿಸುವ ಮೂಲಕ ಭಾರತದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ದರ ಸಮರಕ್ಕೆ ಕಾರಣಾಗಿದ್ದಾರೆ. ಭಾರತದಲ್ಲಿ ಕಡಿಮೆ ದರದಲ್ಲಿ ಡೇಟಾ ಖರೀದಿಗೆ ಅವಕಾಶವಾಗಿದೆ ಎಂದಿದೆ.
ಚೀನಾ ನಾಯಕ ಮಾವೋ ಝೆಡಾಂಗ್ ಬಳಿಕ ಆ ದೇಶದ ಅತ್ಯಂತ ಜನಪ್ರಿಯಕ ನಾಯಕ ಕ್ಸಿ ಎಂದು ಫೋಬ್ಸ್ì ಹೇಳಿದೆ. ಮೈಕ್ರೋಸಾಫ್ಟ್ ಸಿಇಒ ಸತ್ಯಾ ನಾಡೆಳ್ಲ 40ನೇ ಸ್ಥಾನದಲ್ಲಿದ್ದಾರೆ.
ಇತರ ಪ್ರಮುಖರು ಪ್ರಭಾವಿಗಳು
ಹೆಸರು ಸ್ಥಾನ ರ್‍ಯಾಂಕಿಂಗ್