Advertisement

1 ಕೋಟಿ ಮೌಲ್ಯದ ಹೆರಾಯಿನ್‌ ವಶ, ಭಾರತೀಯರಿಬ್ಬರ ಬಂಧನ

03:58 PM Feb 03, 2018 | udayavani editorial |

ರಾಮೇಶ್ವರಂ, ತಮಿಳು ನಾಡು : ಶ್ರೀಲಂಕಾ ದ್ವೀಪ ರಾಷ್ಟ್ರ ದೊಳಗೆ ಸುಮಾರು 1 ಕೋಟಿ ರೂ. ಮೌಲ್ಯದ 425 ಗ್ರಾಂ ಹೆರಾಯಿನ್‌ ಮಾದಕ ದ್ರವ್ಯವನ್ನು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಇಬ್ಬರು ಭಾರತೀಯ ಪ್ರಜೆಗಳನ್ನು ಲಂಕಾ ನೌಕಾಪಡೆಯವರು ಬಂಧಿಸಿದ್ದಾರೆ. 

Advertisement

ಹೆರಾಯಿನ್‌ ಕಳ್ಳಸಾಗಣೆಯ ಖಚಿತ ಮಾಹಿತಿ ಪಡೆದ ಲಂಕಾ ನೌಕಾ ಪಡೆ ಅಧಿಕಾರಿಗಳು ಮನ್ನಾರ್‌ ದೂರ ಸಮುದ್ರದಲ್ಲಿ ತಮ್ಮ  ಸಾಗರವ್ಯಾಪ್ತಿ ಪ್ರದೇಶದಲ್ಲಿ ಧನುಷ್‌ಕೋಡಿಯವರಾದ ಇಬ್ಬರು ಭಾರತೀಯ ಪ್ರಜೆಗಳನ್ನು ಬಂಧಿಸಿ ಅವರ ಬಳಿ ಇದ್ದ 425 ಗ್ರಾಂ ಹೆರಾಯಿನ್‌ ಮತ್ತು ಬೀಡಿಯನ್ನು ವಶಕ್ಕೆ ತೆಗೆದುಕೊಂಡರು ಎಂದು ಗುಪ್ತಚರ ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next