Advertisement

ಅಸ್ಸಾಂ: Microlight aircraft ಪತನ: ಇಬ್ಬರು ಪೈಲಟ್‌ ಸಾವು

05:04 PM Feb 15, 2018 | Team Udayavani |

ಜೋರ್ಹಾಟ್‌ :  ಅಸ್ಸಾಮಿನ ಜೋರ್ಹಾಟ್‌ನಲ್ಲಿ ಇಂದು ಗುರುವಾರ ಮೈಕ್ರೋ ಲೈಟ್‌ ಏರ್‌ ಕ್ರಾಫ್ಟ್ ಪತನಗೊಂಡು ಅದರೊಳಗಿದ್ದ ವಾಯು ಪಡೆಯ ಇಬ್ಬರು ಸಿಬಂದಿಗಳು ಮೃತಪಟ್ಟರು. 

Advertisement

ಲಘು ವಿಮಾನ ತನ್ನ ದೈನಂದಿನ ಹಾರಾಟದಲ್ಲಿ ನಿರತವಾಗಿದ್ದ ವೇಳೆ ಈ ದುರ್ಘ‌ಟನೆ ಸಂಭವಿಸಿತು. ಇಬ್ಬರು IAF ಸಿಬಂದಿಗಳು ವೈರಸ್‌ ಎಸ್‌ಡಬ್ಲ್ಯು80 ಮೈಕ್ರೋಲೈಟ್‌ ವಿಮಾನವನ್ನು ಚಲಾಯಿಸುತ್ತಿದ್ದರು. 

ಜೋರ್ಹಾಟ್‌ ವಾಯು ನೆಲೆಯಿಂದ ಟೇಕಾಫ್ ಆದ ತತ್‌ಕ್ಷಣವೇ ವಿಮಾನ ಪತನಗೊಂಡಿತು. ಇಬ್ಬರೂ ಪೈಲಟ್‌ಗಳು IAF ವಿಂಗ್‌ ಕಮಾಂಡರ್‌ ಗಳಾಗಿದ್ದರು.

ಈ ಅಪಘಾತ ಹೇಗೆ ಉಂಟಾಯಿತು ಎಂಬ ಬಗ್ಗೆ ಸದ್ಯಕ್ಕೆ ವಿವರಗಳು ಸಿಕ್ಕಿಲ್ಲ. ಈ ಪತನಕ್ಕೆ ಸಂಬಂಧಿಸಿ ತನಿಖೆಗೆ ಆದೇಶ ನೀಡಲಾಗಿದೆ. 

ಮಾಜೂಲಿ ನದೀ ದ್ವೀಪದ ಸಮೀಪದಲ್ಲಿರುವ ಸುಮೋಯಿಮರಿ ಎಂಬ ಗ್ರಾಮದಲ್ಲಿ ಪತನಗೊಂಡ ವಿಮಾನದ ಅವಶೇಷಗಳು ಪತ್ತೆಯಾಗಿರುವುದಾಗಿ ವರದಿಯಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next