Advertisement

68ನೇ ಸೀನಿಯರ್ ರಾಷ್ಟ್ರೀಯ ಕಬ್ಬಡ್ಡಿ ಚಾಂಪಿಯನ್ ಶಿಪ್ ಜಿಲ್ಲೆಯ ಇಬ್ಬರು ಬಾಲಕಿಯರು ಆಯ್ಕೆ

03:15 PM Mar 07, 2022 | Team Udayavani |

ಮಹಾಲಿಂಗಪುರ : ಬಾಗಲಕೋಟೆ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ  ಮಹಿಳೆಯರ ವಿಭಾಗದ ( ಸೀನಿಯರ್ ನ್ಯಾಷನಲ್ ) ಚಾಂಪಿಯನ್ ಶಿಪ್ ಗೆ ಕರ್ನಾಟಕ ರಾಜ್ಯ ಮಹಿಳಾ ತಂಡಕ್ಕೆ ರಬಕವಿ-ಬನಹಟ್ಟಿ ತಾಲೂಕಿನ ಕೆಸರಗೊಪ್ಪ ಗ್ರಾಮದ ಸರಕಾರಿ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹಾಗೂ ಕೆಸರಗೊಪ್ಪದ ಡಾ.ಸಿ.ಹೊನ್ನಪ್ಪ ಕಬ್ಬಡಿ ಅಕಾಡೆಮಿಯ ಕ್ರೀಡಾಪಟುಗಳಾದ ಕು.ದೀಪಾ ಲ.ಬ್ಯಾಕೂಡ, ದಾನೇಶ್ವರಿ ಬ.ಬ್ಯಾಕೂಡ  ಆಯ್ಕೆಯಾಗಿದ್ದಾರೆ.

Advertisement

ಇದೇ ಮಾರ್ಚ್ 10 ರಿಂದ 13ರವರೆಗೆ ಹರಿಯಾಣದಲ್ಲಿ ನಡೆಯಲಿರುವ 68 ನೇ ಸಿನಿಯರ್ ರಾಷ್ಟ್ರೀಯ  ಕಬ್ಬಡ್ಡಿ  ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯ ತಂಡದ 12 ಜನ ಕ್ರೀಡಾಪಟುಗಳಲ್ಲಿ ಕೆಸರಗೊಪ್ಪ ಗ್ರಾಮದ ಈ ಇಬ್ಬರು ಬಾಲಕಿಯರು ಕ್ರೀಡಾಪಟುಗಳಾಗಿ ಆಟವಾಡುತ್ತಿರುವುದು  ಹೆಮ್ಮೆಯ ಸಂಗತಿ.

ಈ ವಿದ್ಯಾರ್ಥಿಗಳಿಗೆ ಡಾ.ಸಿ.ಹೊನ್ನಪ್ಪ ಕಬ್ಬಡ್ಡಿ ಅಕಾಡೆಮಿಯ ಅಧ್ಯಕ್ಷ ಡಿ.ಎಂ.ಬ್ಯಾಕೂಡ ಅವರು ತರಬೇತಿ ನೀಡಿದ್ದಾರೆ. ಒಂದೇ ಗ್ರಾಮದ ಇಬ್ಬರು ಬಾಲಕಿಯರು  ಏಕಕಾಲಕ್ಕೆ ಕರ್ನಾಟಕ ರಾಜ್ಯ ತಂಡದ ಆಟಗಾರರಾಗಿ ಆಯ್ಕೆಯಾಗಿರುವದಕ್ಕೆ ಕೆಸರಗೊಪ್ಪ ಗ್ರಾಮದ ಗುರುಹಿರಿಯರು, ಹಿರಿಯ-ಕಿರಿಯ ಕ್ರೀಡಾಪಟುಗಳು, ಕಾಲೇಜಿನ ಪ್ರಾಚಾರ್ಯರು, ಸಿಬ್ಬಂದಿ ವರ್ಗ, ಬಾಗಲಕೋಟೆ ಜಿಲ್ಲೆಯ ಸಮಸ್ತ ಕ್ರೀಡಾಪಟುಗಳು, ನಿರ್ಣಾಯಕರು, ಜಿಲ್ಲೆಯ ಪದಾಧಿಕಾರಿಗಳು ಆಯ್ಕೆಯಾದ ಇಬ್ಬರು ಕ್ರೀಡಾಪಟುಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next