Advertisement

ಅನಾಕಡೆಮಿಯಂತಹ ಸಂಸ್ಥೆಯನ್ನು ಕಟ್ಟಿ ಬೆಳೆಸಿದವರ ಯಶೋಗಾಥೆ ಇದು

06:15 PM Sep 07, 2020 | Karthik A |

ಈ ಕಥೆ ಜೈಪುರದಲ್ಲಿ ವಾಸಿಸುವ ಇಬ್ಬರು ಸ್ನೇಹಿತರಾದ ಗೌರವ್‌ ಮುಂಜಾಲ್‌ ಮತ್ತು ರೋಮನ್‌ ಸೈನಿ ಅವರದು. ಅವರ ಅವಿರತ ಸಾಧನೆ, ಉತ್ಕೃಷ್ಟ ಉತ್ಸಾಹದ ಹಾಗೂ ಇತರರ ಜೀವನವನ್ನು ರೂಪಿಸುವ ಇರಾದೆಯು ಒಂದು ಸಂಸ್ಥೆಯ ಮೂಲಕ ಈಡೇರಿದೆ.

Advertisement

ಬಾಲ್ಯದಲ್ಲಿರಬೇಕಾದರೆ ನಮ್ಮನ್ನು ನಿದ್ದೆಯಲ್ಲೂ ಕಾಡುವ ನೂರಾರು ಕನಸುಗಳು. ನಾನು ಹಾಗೆ ಆಗಬೇಕು, ಹೀಗೆ ಆಗಬೇಕು ಎಂಬಿತ್ಯಾದಿ ಬಯಕೆಗಳು. ಶಾಲಾ ವಾರ್ಷಿಕೋತ್ಸವ ಅಥವ ಯಾವುದಾದರೊಂದು ಸಮಾರಂಭಕ್ಕೆ ಗಣ್ಯರನ್ನು ಅತಿಥಿಗಳಾಗಿ ಕರೆದಾಗ ಅವರಂತೆ ನಾನು ಆಗಬೇಕು ಎಂಬ ಕನಸು ಸಾಮಾನ್ಯವಾಗಿದೆ. ನಾವೆಲ್ಲರೂ ಇಂತಹ ನೂರಾರು ಕನಸನ್ನು ದಾಟಿಯೇ ಬಂದಿದ್ದೇವೆ.

ಕೆಲವರಿಗೆ ನಾನು ಐಪಿಎಸ್‌ ಆಗಬೇಕು, ಎಂಜಿನಿಯರ್‌ ಆಗಬೇಕು ಎಂಬ ಕನಸುಗಳಿರುತ್ತವೆ. ಇವೆಲ್ಲದರ ಸಕಾರಗೊಳಿಸುವುದಕ್ಕಾಗಿ ಅವಿರತವಾದ ಶ್ರಮವನ್ನು ಪಡುತ್ತೇವೆ. ಕೆಲವರಿಗೆ ಅದನ್ನು ಈಡೇರಿಸಲು ಸಾಧ್ಯವಾದರೆ, ಕೆಲವರ ಪಾಲಿಗೆ ಅದು ಗಗನ ಕುಸುಮವೇ ಸರಿ. ಆದರೆ ಇಲ್ಲಿರುವ ಕಥೆ ಹಾಗಿಲ್ಲ.

ಈ ಕಥೆಯ ಎರಡು ಹೆಸರುಗಳು ಅಸಾಧಾರಣ ವ್ಯಕ್ತಿತ್ವಗಳು. ಅತ್ಯುನ್ನತ ಹುದ್ದೆಯನ್ನು ತೊರೆದು ಆಧುನಿಕವಾಗಿ ಶಿಕ್ಷಣ ಕ್ಷೇತ್ರದಲ್ಲಿ ಮೋಡಿ ಮಾಡುವಂತಹ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ಕೈಗಳನ್ನು ಬಲಪಡಿಸಿದವರು. ಇವರಿಬ್ಬರು ಅನಾಕಾಡೆಮಿ ಎಂಬ ಸಂಸ್ಥೆಯ ಆಧಾರ ಸ್ತಂಭಗಳು. 5 ವರ್ಷಗಳ ಹಿಂದೆ ದೇಶದ 200 ಕಂಪನಿಗಳ ಕ್ಲಬ್‌ಗಳಲ್ಲಿ ಪ್ರಾರಂಭಿಸಿದರು. ಆನ್‌ಲೈನ್‌ ಶಿಕ್ಷಣ ವೇದಿಕೆಯಲ್ಲಿ ಅನಾಕಾಡೆಮಿ ಇಂದು ವಿಶ್ವದ ಆರನೇ ಸ್ಥಾನದಲ್ಲಿದೆ. ಕಂಪನಿಯ ಪ್ರಸ್ತುತ ಮೌಲ್ಯಮಾಪನ 11 ಸಾವಿರ ಕೋಟಿ (45 1.45 ಬಿಲಿಯನ್‌).

ಕಂಪನಿಯನ್ನು ಪ್ರಾರಂಭಿಸಿದ ಗೌರವ್‌ ಮುಂಜಾಲ್, ಕಂಪ್ಯೂಟರ್‌ ಎಂಜಿನಿಯರಿಂಗ್‌ನಲ್ಲಿ ಬಿಟೆಕ್‌ ಪದವೀಧರ. ತನಗೆ ಲಭ್ಯವಿದ್ದ ಲಕ್ಷಾಂತರ ಮೌಲ್ಯದ ಪ್ಯಾಕೇಜ್‌ ಕೆಲಸವನ್ನು ತೊರೆದು ಈ ಸಂಸ್ಥೆಯ ತಾಯಿ ಬೇರಾದವರು. ಅವರ ತಂದೆ ಡಾ| ಇಶ್‌ ಮುಂಜಾಲ್‌ ನಗರದ ಹೆಸರಾಂತ ವೈದ್ಯರು. ಗೌರವ್‌ ಅವರಿಗೆ ಜತೆಯಾದವರು ರೋಮನ್‌ ಸೈನಿ ಎಂಬ ಐಎಎಸ್‌ ಅಧಿಕಾರಿ. ತಾನು ಸೇವೆ ಸಲ್ಲಿಸಲು ಆರಂಭವಾದ 6 ತಿಂಗಳ ಬಳಿಕ ರಾಜೀನಾಮೆ ನೀಡಿದರು.‌

Advertisement

ಇವರಿಬ್ಬರ ಈ ಅನಾಕಾಡೆಮಿ ಪರಿಕಲ್ಪನೆ ಹುಟ್ಟಿದ್ದು ಯೂಟ್ಯೂಬ್‌ನಲ್ಲಿ. ಗೌರವ್‌ ಮುಂಜಾಲ್‌ ಇದನ್ನು ಕಾಲೇಜು ಸಮಯದಲ್ಲಿ ಯೂಟ್ಯೂಬ್‌ ಚಾನೆಲ್‌ವೊಂದರ ಮೂಲಕ ಪ್ರಾರಂಭಿಸಿದರು. ಬಳಿಕ ಇದಕ್ಕೆ ಬೇಡಿಕೆ ಹೆಚ್ಚುತ್ತಾ ಹೋದ ಕಾರಣ ಅದನ್ನು ಮುಂದುವರಿಸಲು ತನ್ನ ಸ್ನೇಹಿತ ಐಎಎಸ್‌ ರೋಮನ್‌ ಸೈನಿ ಅವರನ್ನು 2015ರಲ್ಲಿ ಜಾಯಿನ್‌ ಆಗುವಂತೆ ಕೇಳಿಕೊಂಡರು. ರೋಮನ್‌ ಕೆಲಸವನ್ನು ಬಿಟ್ಟು ಹೆಮ್ಮೆಯಿಂದ ಗೆಳೆಯನ ಕೈಹಿಡಿದನು. ಹಿಮೇಶ್‌ ಸಿಂಗ್‌ ಎಂಬವರೂ ಇವರಿಗೆ ಬೆಂಬಲವಾಗಿ ನಿಂತರು.

ಈಗ ಬೃಹತ್‌ ಸಂಸ್ಥೆಯಾಗಿ ಬೆಳೆದಿರುವ ಅನಾಕಡೆಮಿಯಲ್ಲಿ 18 ಸಾವಿರ ಶಿಕ್ಷಕರು 35 ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಾರೆ. ಅನಾಕಾಡೆಮಿ ಯೂಟ್ಯೂಬ್‌ ಮತ್ತು ಅಪ್ಲಿಕೇಶನ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. 18 ಸಾವಿರ ಶಿಕ್ಷಣಾರ್ಥಿಗಳು ಸುಮಾರು 35 ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿದ್ದಾರೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ಸಂಸ್ಥೆಗಳು ಇವರ ಜತೆಯಾಗುತ್ತಿದ್ದಾರೆ. ಇದು ಹೊಸ ಕೈಗಳಿಗೆ ಉದ್ಯೋಗಗಳನ್ನು ದೊರಕಿಸಿಕೊಡಲು ಅನುವುಮಾಡಿಕೊಟ್ಟಿದೆ. ನೂರಾರು ಜನರನ್ನು ಕಂಪೆನಿಗಳು ಅನಾಕಾಡೆಮಿಯಿಂದ ನೇರವಾಗಿ ನೇಮಿಸಿಕೊಂಡಿದೆ. ಸದ್ಯ ಅನಾಕಾಡೆಮಿಯಲ್ಲಿ 3.5 ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದಾರೆ. ಈ ಬಾರಿಯ ಐಪಿಎಲ್‌ ನ ಅಧಿಕೃತ ಪಾಲುದಾರಿಕೆಯನ್ನೂ ಇದು ಹೊಂದಿದೆ.

 

 

 

 

Advertisement

Udayavani is now on Telegram. Click here to join our channel and stay updated with the latest news.

Next