Advertisement
ಖಾಸಗಿಯಾಗಿ ಎಸೆಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಜಿಲ್ಲಾಕೇಂದ್ರದಲ್ಲಿ ಬರೆಯಬೇಕೆಂಬುದು ನಿಯಮ. ರೆಗ್ಯುಲರ್ ವಿದ್ಯಾರ್ಥಿಗಳು ಆಯಾ ಶಾಲಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬಹುದು. ಆದರೆ ಎಂಡೋ ಪೀಡಿತ ವಿದ್ಯಾರ್ಥಿಗಳು ಖಾಸಗಿಯಾಗಿ ಪರೀಕ್ಷೆ ಕಟ್ಟಿದ್ದು, ಮಂಗಳೂರಿಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಈ ಸಮಸ್ಯೆ ಯನ್ನು ಮನಗಂಡ ಇಲಾಖೆ, ಶೇ.60ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಎಂಡೋ ಬಾಧೆಗೊಳಗಾದ ವಿದ್ಯಾರ್ಥಿಗಳಿಗೆ ಸಮೀಪದ ಕೇಂದ್ರದಲ್ಲೇ ಉತ್ತರಿಸಲು ಅನುಮತಿ ನೀಡಿದೆ.
ನೂಜಿಬಾಳ್ತಿಲ ನಿವಾಸಿ ಮನೋಜ್ ಶೇ.80 ರಷ್ಟು ಎಂಡೋ ಪೀಡಿತ. ಎಲುಬು ವಿಕಾರ ವಾಗಿ ಬೆಳೆಯುವುದೇ ಇವರ ಸಮಸ್ಯೆ. ಮೂಗಿ ನಲ್ಲಿ ಗಡ್ಡೆ ಬೆಳೆದಿದೆ. ಹೃದಯ ಬಡಿತ ಕಡಿಮೆ. ಜೋರು ಮಾತನಾಡಲು ಆಗುವುದಿಲ್ಲ, ಕೀರಲು ಧ್ವನಿ. ಒಬ್ಬನೇ ಮಗನಾಗಿರುವ ಇವರಿಗೆ ಉನ್ನತ ಶಿಕ್ಷಣ ಪಡೆದು, ಉತ್ತಮ ಉದ್ಯೋಗ ಗಿಟ್ಟಿಸಿಕೊಂಡು ತಂದೆ – ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ಮಹದಾಸೆ.
Related Articles
Advertisement
ಕಿವುಡುತನದಿಂದ ಬಳಲುತ್ತಿರುವ ಇವರಿಗೆ ಹಿಯರಿಂಗ್ ಯಂತ್ರ ಬೇಕೆಂಬ ಬೇಡಿಕೆ ಇತ್ತು. ಸಾಕಷ್ಟು ದಾನಿಗಳ ಬಳಿ ಮಾತನಾಡಿದರೂ ಪ್ರಯೋಜನವಾಗಿಲ್ಲ. ಇದೀಗ ಹಿಯರಿಂಗ್ ಯಂತ್ರದ ಸಹಾಯವಿಲ್ಲದೆ ಪರೀಕ್ಷೆ ಬರೆಯು ವಂತಾಗಿದೆ ಎಂದು ಅವರ ಶಿಕ್ಷಕಿ ತಿಳಿಸಿದ್ದಾರೆ.
ರೇವತಿಆಲಂಗಾರು ಬಳಿಯ ನೆಕ್ಕಲ ನಿವಾಸಿ ರೇವತಿ ಅವರಿಗೆ ಸುಮಾರು 26ರ ಹರೆಯ. ಇವರು ಫಿಟ್ಸ್ ನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತುದಿಗಾಲಿನಲ್ಲಿ ನಡೆಯುತ್ತಿದ್ದು, ಒಂದು ಭಾಗದಲ್ಲಿ ಬಲವೇ ಇಲ್ಲ. ಇವರ ಅಣ್ಣ ಕೂಡ ಎಂಡೋ ಪೀಡಿತ. ತಮ್ಮ ಹಾಗೂ ಅಮ್ಮನ ಜತೆ ವಾಸವಾಗಿದ್ದಾರೆ. ಕುಂತೂರು ಪ್ರೌಢಶಾಲೆಯಲ್ಲಿ ದಾಖಲಾತಿ ಪಡೆದುಕೊಂಡಿದ್ದಾರೆ. ಇಂದಿನ ಪರೀಕ್ಷೆ
ಎಸೆಸೆಲ್ಸಿ ಪರೀಕ್ಷೆಯ ಆರಂಭದಲ್ಲೇ ಪ್ರಥಮ ಭಾಷೆಯ ಪರೀಕ್ಷೆ ನಡೆಯಲಿದೆ. ಪ್ರಥಮ ಭಾಷೆಯಾಗಿ ಕನ್ನಡ ಅಥವಾ ಸಂಸ್ಕೃತ ಭಾಷೆಯನ್ನು ಆಯ್ಕೆ ಮಾಡಿಕೊಂಡವರು ಗುರುವಾರ ಪರೀಕ್ಷೆ ಎದುರಿಸಲಿದ್ದಾರೆ. ಇಂದಿನಿಂದ ಎಸೆಸೆಲ್ಸಿ ಪರೀಕ್ಷೆ: ಸಕಲ ಸಿದ್ಧತೆ
ಉಡುಪಿ/ಮಂಗಳೂರು: ಇಂದಿನಿಂದ ಎಸೆಸೆಲ್ಸಿ ಪರೀಕ್ಷೆ ಆರಂಭಗೊಳ್ಳಲಿದ್ದು, ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ದ.ಕನ್ನಡದ 95, ಉಡುಪಿ ಜಿಲ್ಲೆಯ 51 ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ನಿಷೇಧಾಜ್ಞೆ
ಪರೀಕ್ಷೆ ಸುಸೂತ್ರವಾಗಿ ಮತ್ತು ದೋಷ ರಹಿತವಾಗಿ ನಡೆಸಲು ಹಾಗೂ ಅವ್ಯವಹಾರಗಳನ್ನು ತಡೆಗಟ್ಟಲು ಮಾ.21ರಿಂದ ಎ.4ರ ವರೆಗೆ ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ 200 ಮೀ. ವ್ಯಾಪ್ತಿಯಲ್ಲಿ ಬೆಳಗ್ಗೆ 8 ರಿಂದ ರಾತ್ರಿ 6ರ ವರೆಗೆ ಸೆಕ್ಷನ್ 144ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 438 ಕಡೆ ಸಿಸಿ ಕೆಮರಾ
ಉಡುಪಿ ಜಿಲ್ಲೆಯ 438 ಪರೀಕ್ಷಾ ಕೇಂದ್ರದ ಕೊಠಡಿಗಳಲ್ಲಿ ಸಿಸಿ ಕೆಮರಾ ಅಳವಡಿಸಲಾಗಿದ್ದು, ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಪರೀûಾ ಕೇಂದ್ರಗಳ ಪರೀಕ್ಷೆಯ ಉತ್ತರ ಪತ್ರಿಕೆ ಇಡಲು ಭದ್ರತಾ ಕೊಠಡಿಯ ವ್ಯವಸ್ಥೆಯನ್ನು ಉಡುಪಿ ಕ್ರಿಶ್ಚಿಯನ್ ಪ್ರೌಢಶಾಲೆಯಲ್ಲಿ ಮಾಡಲಾಗಿದೆ. ಕೆಎಸ್‌ಆರ್‌ಟಿಸಿ ಪ್ರಯಾಣ ಉಚಿತ
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ರಿಯಾಯಿತಿ ಪಾಸ್ ಹೊಂದಿರುವ ವಿದ್ಯಾರ್ಥಿಗಳು ಪರೀಕ್ಷಾ ಅವಧಿಯಲ್ಲಿ ತಮ್ಮ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಸಂಚರಿಸುವಾಗ ವಿದ್ಯಾರ್ಥಿಗಳು ರಿಯಾತಿ ಪಾಸ್ ಹಾಗೂ ಪರೀಕ್ಷಾ ಪ್ರವೇಶಪತ್ರವನ್ನು ತೋರಿಸಬೇಕು ಎಂದು ಕೆಎಸ್‌ಆರ್‌ಟಿಸಿ ಪ್ರಕಟನೆ ತಿಳಿಸಿದೆ.