ಜೋಯಿಡಾ (ಉತ್ತರ ಕನ್ನಡ): ಜೋಯಿಡಾ ತಾಲೂಕಿನ ಗಣೇಶಗುಡಿ ಬಳಿಯ ಕಾಳಿ ಸೇತುವೆಯಲ್ಲಿ ಸೆಲ್ಫಿ ತೆಗೆಯುತ್ತಿದ್ದಾಗ ಕಾಲುಜಾರಿ ನದಿಗೆ ಬಿದ್ದು ಮೃತಪಟ್ಟಿದ್ದ ಯುವಕ ಮತ್ತು ಯುವತಿಯ ಶವ ಮಂಗಳವಾರ ಪತ್ತೆಯಾಗಿದೆ.
ಮೃತಪಟ್ಟ ಯುವತಿಯನ್ನು ಧಾರವಾಡದಲ್ಲಿ ಕಲಿಯುತ್ತಿರುವ ಬೀದರ್ ಮೂಲದ ರಕ್ಷಿತಾ ಮತ್ತು ಯುವಕನನ್ನು ಬೀದರ್ ಮೂಲದ ಪುರುಷೋತ್ತಮ ಪಾಟೀಲ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ:ಪೊಲೀಸ್ ಠಾಣೆ ಮೆಟ್ಟಿಲೇರಿದ ಸಂಜನಾ ಸಹೋದರಿ ನಿಕ್ಕಿ ಗಲ್ರಾನಿ
ಸೋಮವಾರ ಸಂಜೆ ಸೆಲ್ಫಿ ತೆಗೆಯುವಾಗ ಯುವತಿ ಕಾಲು ಜಾರಿ ಕಾಳಿ ನದಿಗೆ ಬಿದ್ದಿದ್ದರು. ಬಳಿಕ ಆಕೆಯನ್ನು ರಕ್ಷಿಸಲು ಜಿಗಿದಿದ್ದ ಯುವಕ ಕೂಡಾ ನೀರುಪಾಲಾಗಿದ್ದ.
ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯರು ಮಂಗಳವಾರ ಇಬ್ಬರ ಶವವನ್ನು ಮೇಲಕ್ಕೆತ್ತಿದ್ದಾರೆ.
ಇದನ್ನೂ ಓದಿ: ‘ಐಸಿಸಿ ಪ್ಲೇಯರ್ ಆಫ್ ದಿ ಮಂತ್’ನಲ್ಲಿ ಭಾರತೀಯರ ಪಾರಮ್ಯ: ಈ ಬಾರಿ ಭುವನೇಶ್ವರ್ ಗೆ ಗೌರವ