Advertisement

ಬರಿಮಾರು: ನೇತ್ರಾವತಿಯಲ್ಲಿ ಮುಳುಗಿ ಇಬ್ಬರ ಸಾವು; ಓರ್ವನ ರಕ್ಷ‌ಣೆ

01:22 AM May 26, 2019 | Team Udayavani |

ಬಂಟ್ವಾಳ: ಮದುವೆ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಬಂದಿದ್ದ ತಂಡದ ಇಬ್ಬರು ಬರಿಮಾರು ಗ್ರಾಮದ ಕಡವಿನ ಬಾಗಿಲು ನೇತ್ರಾವತಿ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಮೇ 25ರಂದು ಸಂಜೆ ಸಂಭವಿಸಿದೆ.

Advertisement

ಮೃತರನ್ನು ಕಾಸರಗೋಡಿನ ಕುಂಬಳೆ ಕಡಪ್ಪುರದ ಡ್ಯಾನ್ಸ್‌ ಟ್ರೂಪ್‌ನ ಅಜಿತ್‌ (40) ಮತ್ತು ಡ್ಯಾನ್ಸರ್‌ ಮನೀಷ್‌ (14) ಎಂದು ಗುರುತಿಸಲಾಗಿದೆ. ಅಪಾಯದಲ್ಲಿದ್ದ ಯಕ್ಷಿತ್‌ (20) ಎಂಬಾತನನ್ನು ಸ್ಥಳೀಯ ಈಜುಗಾರ ಕೇಶವ ಬರಿಮಾರು ರಕ್ಷಿಸಿದ್ದಾರೆ.

ಫ‌ಟನೆ ವಿವರ
ಬರಿಮಾರು ಪಾಪೆತ್ತಿಮಾರು ನಿವಾಸಿ ಕೃಷಿಕ ಸಂಜೀವ ಬೋವಿ ಅವರ ಮಕ್ಕಳಿಬ್ಬರ ವಿವಾಹವು ಮೇ 26ರಂದು ಕೋಟೆಕಾರ್‌ ಉಚ್ಚಿಲದ ಅಡ್ಕ ಶ್ರೀ ಭಗವತಿ ಪ್ರಸಾದ ಸಭಾ ಮಂದಿರದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮನೆಯಲ್ಲಿ ಶನಿವಾರ ಮೆಹಂದಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು 7 ಮಂದಿಯ ತಂಡವು ಅಜಿತ್‌ ಅವರ ನೇತೃತ್ವದಲ್ಲಿ ಬಂದಿತ್ತು.

ತಂಡದ ಕೆಲವರು ಸ್ನಾನ ಮಾಡಲೆಂದು ನದಿಯ ಕಡೆಗೆ ಹೋಗಿದ್ದರು. ಅವರಿಗೆ ಈ ಪರಿಸರದ ಪರಿಚಯ ಕಡಿಮೆಯಿದ್ದುದರಿಂದ ಅಪಾಯಕಾರಿ ಸ್ಥಳದಲ್ಲಿ ಸ್ನಾನಕ್ಕಿಳಿದಿದ್ದರು. ಅಲ್ಲಿ ನಿರ್ಮಿಸಲಾದ್ದ ಟ್ಯಾಂಕೊಂದರ ಹತ್ತಿರದ ಆಳದ ಸ್ಥಳದಲ್ಲಿ ಸ್ನಾನಕ್ಕಿಳಿದಿದ್ದ ಮನೀಷ್‌ ಮತ್ತು ಯಕ್ಷಿತ್‌ ಅಪಾಯಕ್ಕೆ ಸಿಲುಕಿದ್ದರು.

ಇದನ್ನು ಗಮನಿಸಿದ ಅಜಿತ್‌ ರಕ್ಷಣೆಗೆ ಧಾವಿಸಿದ್ದರು. ಆದರೆ ರಕ್ಷಿಸಲಾಗದೆ ಅವರು ಕೂಡ ಅಪಾಯಕ್ಕೆ ಸಿಲುಕಿದರು.

Advertisement

ವಿಷಯ ತಿಳಿದು ಬಂದ ಸ್ಥಳೀಯರು ಅಪಾಯದಲ್ಲಿದ್ದ ಮೂವರ ಪೈಕಿ ಯಕ್ಷಿತ್‌ನನ್ನು ರಕ್ಷಿಸುವಲ್ಲಿ ಸಫ‌ಲರಾದರು. ಮೃತ ಅಜಿತ್‌ ಅವರು ಪತ್ನಿ, 5ರ ಹರೆಯದ ಪುತ್ರಿ ಹಾಗೂ 2ರ ಹರೆಯದ ಪುತ್ರನನ್ನು ಅಗಲಿದ್ದಾರೆ.

ಮರಣೋತ್ತರ ಪರೀಕ್ಷೆಗೆ ಸಿಬಂದಿಯಿಲ್ಲ: ಆರೋಪ
ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸುವುದಕ್ಕೆ ಸಿಬಂದಿ ಇಲ್ಲ ಎಂಬ ಕಾರಣಕ್ಕೆ ಮೃತದೇಹಗಳನ್ನು ಪೊಲೀಸರು ಕೋಲ್ಡ… ಸ್ಟೋರೇಜ್‌ನಲ್ಲಿ ಇಡುವುದಕ್ಕೆ ತುಂಬೆ ಖಾಸಗಿ ಆಸ್ಪತ್ರೆಗೆ ಕಳುಹಿಸಿ¨ªಾರೆ. ಮೇ 36ರಂದು ಬೇರೆಡೆಯಿಂದ ಸಿಬಂದಿಯನ್ನು ಕರೆಸಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಬೇಕಿದೆ.

ಇಂತಹ ದುರ್ಘ‌ಟನೆಗಳಿಂದ ಜೀವಹಾನಿಯ ಘಟನೆಗಳು ನಡೆದಾಗ ತತ್‌ಕ್ಷಣ ಮರಣೋತ್ತರ ಪರೀಕ್ಷೆ ನಡೆಸುವುದಕ್ಕೆ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಸಿಬಂದಿ ಇರುವುದಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಜಿÇÉಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌ ಅವರ ಬಳಿ ಮಾಹಿತಿ ಕೇಳಿದಾಗ, ಹಿಂದೆ ಇದ್ದ ಡಿ ದರ್ಜೆ ಸಿಬಂದಿ ಬಿಟ್ಟು ಹೋಗಿ¨ªಾರೆ. ಅವರು ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಆದರೆ ಮರಣೋತ್ತರ ಪರೀಕ್ಷೆ ಪ್ರಕರಣಗಳು ಬಂದಾಗ, ಪೊಲೀಸರು ಬೇಡಿಕೆ ಸಲ್ಲಿಸಿದ ತತ್‌ಕ್ಷಣ ಸಿಬಂದಿ ಆಗಮಿಸುತ್ತಾರೆ ಎಂದು ತಿಳಿಸಿ¨ªಾರೆ.

ಎಚ್ಚರಿಕೆ ನೀಡಿದ್ದರು
ಈಜಲು ಬಂದವರಿಗೆ ಒಮ್ಮೆ ಸ್ಥಳೀಯರು ಎಚ್ಚರಿಕೆ ನೀಡಿ ಹಿಂದೆ ಕಳುಹಿಸಿದ್ದರು. ಆದರೆ ಅವರು ಸ್ಥಳೀಯರ ಕಣ್ತಪ್ಪಿಸಿ ಮತ್ತೆ ಈಜಲು ಬಂದಿ¨ªಾರೆ. ಇಲ್ಲಿಗೆ ಬರುವ ಬಹುತೇಕ ಮಂದಿ ನೀರನ್ನು ನೋಡಿ ಈಜಲು ಮುಂದಾಗುತ್ತಾರೆ. ಆದರೆ ಅವರನ್ನು ನಾವು ಇಳಿಯಲು ಬಿಡುವುದಿಲ್ಲ. ಈ ಹಿಂದೆಯೂ ಇಲ್ಲಿ ಇಂತಹ ಅನೇಕ ಘಟನೆಗಳು ನಡೆದಿದ್ದು, ಜೀವಹಾನಿಯ ಘಟನೆಗಳೂ ನಡೆದಿದೆ. ಕೆಲವರನ್ನು ನಾವು ರಕ್ಷಿಸಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ಪಿಎಸ್‌ಐ ಪ್ರಸನ್ನ ಹಾಗೂ ಸಿಬಂದಿ, ಗ್ರಾಮಕರಣಿಕ ಜನಾರ್ದನ ಭೇಟಿ ನೀಡಿ¨ªಾರೆ.

Advertisement

Udayavani is now on Telegram. Click here to join our channel and stay updated with the latest news.

Next