Advertisement

ಚುನಾವಣೆಗೆ ಬರ್ತಿದ್ದಾರೆ ಊರು ಬಿಟ್ಟವರು!

05:42 PM May 11, 2018 | Team Udayavani |

ಶಿರಸಿ: ಕೆಲಸಕ್ಕಾಗಿ ಊರು ಬಿಟ್ಟ ಅನಿವಾಸಿ ಮತದಾರರನ್ನು ಓಟಿಗಾಗಿ ಕರೆಸುವು ಕಸರತ್ತು ನಡೆಯುತ್ತಿದೆ. ಬಹಳಷ್ಟು ಜನ ಬೆಂಗಳೂರಿನಲ್ಲೇ ಇದ್ದು ಅವರನ್ನೆಲ್ಲ ಚುನಾವಣೆಯಲ್ಲಿ ಓಟು ಹಾಕಲು ಬರಲೇಬೇಕೆಂಬ ಒತ್ತಾಯದ ಮೇರೆಗೆ ಕರೆಸಲಾಗುತ್ತಿದೆ. ಅಲ್ಲದೆ, ಆ ಬಗ್ಗೆ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರಲಾರಂಭಿಸಿದೆ.

Advertisement

ಇದು ಕೇವಲ ಒಂದೂರಿನ ಕಥೆಯಲ್ಲ, ಇಡೀ ಹಳ್ಳಿಯ ದಾರಿಗಳು ಹಳ್ಳಿಯ ಕಡೆ ಮುಖಮಾಡದೇ ಪೇಟೆ ದಿಕ್ಕಿಗೆ ಮುಖ ಮಾಡಿದ್ದು ಸಮಸ್ಯೆಯ ಮೂಲವಾಗಿದೆ. ಕೆಲವು ಗ್ರಾಪಂಗಳಲ್ಲೇ ಸಾವಿರಾರು ಮತಗಳು ಪರ ಊರಿನಲ್ಲಿವೆ. ಅವರೆಲ್ಲ ಬಂದು ಮತ ಚಲಾಯಿಸಿದಾಗ ಅಭ್ಯರ್ಥಿ ಗೆಲುವು ಯಾರಿಗೆ ಎಂಬುದು ಬದಲಾಗಬಹುದು ಅಥವಾ ಅಧಿಕ ಅಂತರದಲ್ಲೂ ಗೆಲ್ಲಬಹುದು.

ವೃದ್ಧಾಶ್ರಮ, ಉದ್ಯೋಗ ಕೊರತೆ: ಬಹುತೇಕ ಹಳ್ಳಿಗಳಲ್ಲಿ ಯುವ ಶಕ್ತಿ ಮಹಾ ನಗರದಲ್ಲಿ ದುಡಿಯುವ ಕೈಗಳಾಗಿವೆ. ಹಳ್ಳಿಗಳು ಸಹಜವಾಗಿ ವೃದ್ಧಾಶ್ರಮ ಆಗುತ್ತಿದೆ.

ಬೆಂಗಳೂರಲ್ಲೇ ಅಧಿಕ:
ಊರು ಬಿಟ್ಟ ಗಂಡು ಹಾಗೂ ಹೆಣ್ಣು ಮಕ್ಕಳಲ್ಲಿ ಅತಿ ಹೆಚ್ಚು ಸೇರಿದ್ದು ಬೆಂಗಳೂರಿಗೆ. ಮತದಾರರು ಅಲ್ಲಿ ಸಂಸಾರ ಮಾಡುತ್ತಿದ್ದರೂ ಮಕ್ಕಳ ಮತಗಳು ಬೆಂಗಳೂರಿನಲ್ಲಿವೆ, ಅಪ್ಪ ಅಮ್ಮನ ಮತಗಳು ಕ್ಷೇತ್ರದಲ್ಲೇ ಇವೆ. ಓದಿಗಾಗಿ ಪರ ಊರು ಸೇರಿದವರೂ ಇದ್ದಾರೆ. ನೂರಾರು ಕಿಮೀ, ಕೆಲವೊಮ್ಮೆ ಐನೂರಕ್ಕೂ ಅಧಿ ಕ ಕಿಮೀ ದೂರದಿಂದ ಬಂದು ಮತ ಚಲಾಯಿಸಿಬೇಕಿದೆ. ಬೆಂಗಳೂರು ಮಾತ್ರವಲ್ಲದೇ, ಶಿವಮೊಗ್ಗ, ಮೈಸೂರು, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಹೈದರಾಬಾದ್‌, ಪೂನಾ, ಮುಂಬಯಿ, ಕೇರಳ, ಉಡುಪಿ, ಮಡಿಕೇರಿಗಳಲ್ಲೂ ಇದ್ದಾರೆ. ಪಕ್ಕದ ಗೋವಾದಲ್ಲೂ ಇದ್ದವರು ಕೂಡ ಬಂದು ಮತದಾನ ಮಾಡಲು ವ್ಯವಸ್ಥೆಯಾಗಿದೆ.

ಶನಿವಾರ ನಡೆಯಲಿರುವ ಮತದಾನಕ್ಕೆ ಬಂದರೆ ರವಿವಾರ ಕೂಡ ಊರಲ್ಲಿ ಉಳಿದು ಹೋಗಬಹುದಾಗಿದೆ. ಈ ಕಾರಣದಿಂದ ಊರಿಗೆ ಬರುವ ಬಸ್‌ಗಳು ರಶ್‌ ಆಗಿವೆ. ಈ ಎರಡು ದಿನ ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆ ಕೂಡ ಉಲ್ಬಣ ಆಗುವ ಸಾಧ್ಯತೆ ಇದೆ. ಅಭ್ಯರ್ಥಿಗಳೂ ದೂರದ ಮತಗಳನ್ನು ಕರೆಸಿ ಮತದಾನ ಮಾಡಿಸುವಂತೆ ಮನವೊಲಿಸುವ ಕಸರತ್ತನ್ನೂ ಮಾಡುತ್ತಿದ್ದಾರೆ.

Advertisement

ಮುಂದಿನ ತಲೆಮಾರಿಗಾದರೂ ಶಿರಸಿ. ಸಾಗರದಂತಹ ಪಟ್ಟಣಗಳಲ್ಲಿ ಉದ್ಯೋಗ ಸೃಷ್ಟಿಯ ಜೊತೆ ಓದಿಗೆ ತಕ್ಕ ಉದ್ಯೋಗ ನೀಡುವ ಅವಕಾಶ ಸೃಷ್ಟಿಸಿದರೆ ಪರ ಊರಿನಲ್ಲಿ ನಮ್ಮೂರಿನ ಮತಗಳು
ಹೋಗದೇ ಉಳಿಯಬಹುದು ಎಂದೂ ಯುವಕರು ಹೇಳುತ್ತಿದ್ದಾರೆ.

ಊರಿಗೆ ಬಂದಾಗ ಹಳ್ಳಿಯ, ನಗರದ ಸಮಸ್ಯೆ ನಮ್ಮ ಬಳಿ ಹೇಳುತ್ತಾರೆ. ರೈತರ ಬವಣೆ ಗೊತ್ತಾಗುತ್ತದೆ. ಆದರೆ, ನಮ್ಮ ಶಾಸಕರಾಗುವರಲ್ಲಿ ಇದನ್ನು ಹೇಳ್ಳೋಣ ಎಂದರೆ ಅವರು ಸಿಗುವುದಿಲ್ಲ. ಯಾರೇ ಗೆಲ್ಲಲಿ, ಗೆದ್ದವರು ಬೆಂಗಳೂರಿನಲ್ಲೂ ನಮ್ಮಂಥವರ ಸಮಸ್ಯೆ ಕೇಳುವ ಸಮಯ ಕೊಡಬೇಕು.
ಚಂದ್ರಕಾಂತ ಎಸ್‌. ಹೆಗಡೆ
ಬೆಂಗಳೂರು

ಮದ್ವೆಗೆ ಬರಕಾಗಿತ್ತು. ಆದರೆ, ಓಟೇ ಮಾಡನ ಹೇಳಿ ಮಾಡಿದ್ದಿ. ಅದಕೆ 11ಕ್ಕೆ ಹೊರಡ್ತ್ಯ. ಓಟ್‌ ಮಾಡದೇ.
ಸುವರ್ಣ, ಮುಂಬಯಿ

„ರಾಘವೇಂದ್ರ ಬೆಟ್ಟಕೊಪ್ಪ 

Advertisement

Udayavani is now on Telegram. Click here to join our channel and stay updated with the latest news.

Next