Advertisement

ಬಾಲಸಭಾ ಮಕ್ಕಳ ಎರಡು ದಿನದ ಪೆನ್ಸಿಲ್‌ ಶಿಬಿರ

10:33 PM Jun 10, 2019 | Sriram |

ಪೆರ್ಲ:ಪರಿಸರ ಸ್ನೇಹಿ ವಸ್ತುಗಳ ಬಳಕೆ,ಪ್ರೇರಣೆ ಮೊದಲಾದ ಉದ್ದೇಶವಿರಿಸಿ ಹರಿತ ಕೇರಳ ಮಿಶನ್‌,ಕುಟುಂಬಶ್ರೀ ಮಿಶನ್‌,ಆರೋಗ್ಯ ಇಲಾಖೆ,ಗ್ರಾಮ ಪಂಚಾಯತು ಸಹಕಾರದೊಂದಿಗೆ ಕುಟುಂಬಶ್ರೀಬಾಲಸಭಾ ಮಕ್ಕಳಿಗೆ ಸ್ವರ್ಗ ಎಸ್‌ವಿಎಯುಪಿ ಶಾಲೆಯಲ್ಲಿ ಎರಡು ದಿನಗಳ ವಿನೂತನ ಕಾರ್ಯಕ್ರಮ ಪೆನ್ಸಿಲ್‌ ಶಿಬಿರ ನಡೆಯಿತು.

Advertisement

ಪರಿಸರ ಮಾಲಿನ್ಯ ಉಂಟುಮಾಡುವ ವಸ್ತುಗಳು,ಅದರ ಮರುಬಳಕೆ ಮುಂತಾ ದವುಗಳ ಬಗ್ಗೆ ಆಟದೊಂದಿಗೆ ಪಾಠ ಶೈಲಿಯಲ್ಲಿ ಮಾಹಿತಿ ನೀಡಲಾಯಿತು.ಶಿಬಿರವನ್ನು ಎಣ್ಮಕಜೆ ಗ್ರಾ.ಪಂ.ಕ್ಷೇ.ಕಾ.ಸ್ಥಾಯೀ ಸಮಿತಿ ಅಧ್ಯಕ್ಷೆ ಚಂದ್ರಾವತಿ ಎಂ.ಅವರು ಉದ್ಘಾಟಿಸಿದರು. ಶಾಲೆಯು ಮಕ್ಕಳಿಗೆ ಆಪ್ಯಾಯ ಮಾನವಾಗಿರಬೇಕು.ಶಿಸೌಹಾರ್ದ ಪರಿಸರವು ಮಕ್ಕಳಿಗೆ ಹೆಚ್ಚು ಪ್ರಿಯವಾಗುತ್ತದೆ ಎಂದರು. ವಾರ್ಡ್‌ ಕುಟುಂಬಶ್ರೀ ಎಡಿಎಸ್‌ ಅಧ್ಯಕ್ಷೆ ವಲ್ಸಮ್ಮ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಶಿಕ್ಷಕಿ ಗೀತಾ ಕುಮಾರಿ,ಸಿಡಿಎಸ್‌ ಅಧ್ಯಕ್ಷೆ ಶಾರದಾ,ಉಪಾಧ್ಯಕ್ಷೆ ಶಶಿಕಲಾ ಕೆ.ಶುಭ ಹಾರೈಸಿದರು. ಸ್ವರ್ಗ ಶಾಲಾ ಶಿಕ್ಷಕರಾದ ವೆಂಕಟ ವಿದ್ಯಾಸಾಗರ್‌,ಸಚ್ಚಿದಾ ನಂದ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಪ್ರಮಿ ಎಂ.ಸ್ವಾಗತಿಸಿ,ಜಯಂತಿ ವಂದಿಸಿದರು.ಶಶಿಕಲಾ ಕಾರ್ಯಕ್ರಮನಿರೂಪಿಸಿದರು

ಪರಿಸರ ಜಾಗೃತಿ ಉದ್ದೇಶ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಶಿಕ್ಷಣದಿಂದ ಸಾಧ್ಯ.ಮಕ್ಕಳು ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಲು ಶಿಕ್ಷಕರ ಶ್ರಮದೊಂದಿಗೆ ಹೆತ್ತವರ ಪ್ರೋತ್ಸಾಹವು ಮುಖ್ಯ ಎಂದರು.ಪರಿಸರ ಮಾಲಿನ್ಯಗಳ ಬಗ್ಗೆ ಮಕ್ಕಳಿಗೆ ತಿಳುವಳಿಕೆ ನೀಡಿ ಅವರ ಮೂಲಕ ರಕ್ಷಕರಲ್ಲಿ ಜಾಗೃತಿ ಮೂಡಿಸುವುದು ಶಿಬಿರದ ಉದ್ದೇಶವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next