Advertisement

ಫೆ.10 : 3ನೇ ಹಾಗೂ ಅಂತಿಮ ಕುಂಭ ಶಾಹಿ ಸ್ನಾನಕ್ಕೆ 2 ಕೋಟಿ ಭಕ್ತರು

10:58 AM Feb 09, 2019 | Team Udayavani |

ಅಲಹಾಬಾದ್‌ : ನಾಳೆ ಫೆ.10 ಭಾನುವಾರ, ವಸಂತ ಪಂಚಮಿ. ಅಂತೆಯೇ ಈ ಕುಂಭ ಮೇಳದ ಪ್ರಯುಕ್ತ ನಾಳೆ ಪ್ರಯಾಗರಾಜ್‌ನ ಪವಿತ್ರ ಸಂಗಮದಲ್ಲಿ  3ನೇ ಹಾಗೂ ಅಂತಿಮ ಶಾಹಿ ಸ್ನಾನ ನಡೆಯಲಿದೆ. ಕನಿಷ್ಠ 2 ಕೋಟಿ ಯಾತ್ರಿಗಳು ನಾಳೆಯ ಪವಿತ್ರ ಸ್ನಾನದಲ್ಲಿ ಭಾಗಿಯಾಗುತ್ತಿದ್ದಾರೆ. 

Advertisement

ವಸಂತ ಪಂಚಮಿಯು ವಸಂತ ಋತುವಿನ ಹರಿಕಾರ; ಅಂತೆಯೇ ಇದು ಸರಸ್ವತಿ ದೇವಿಗೆ ಅರ್ಪಿತ ಎಂಬ ನಂಬಿಕೆ, ಶ್ರದ್ಧೆ ಹಿಂದೂಗಳಲ್ಲಿದೆ. 

ವಸಂತ ಪಂಚಮಿಯಂದು ಸಂಗಮದಲ್ಲಿ  ಮೂರನೇ ಹಾಗೂ ಅಂತಿಮ ಶಾಹೀ ಸ್ನಾನದಲ್ಲಿ ಮೂರು ಬಾರಿ ಮುಳುಗೇಳುವವರಿಗೆ ಗಂಗಾ, ಯಮುನಾ ಮತ್ತು ಗುಪ್ತಗಾಮಿನಿಯಾಗಿರುವ ಸರಸ್ವತೀ ದೇವಿಯ ಅನುಗ್ರಹ ಪ್ರಾಪ್ತವಾಗುತ್ತದೆ ಎಂದು ಅಲಹಾಬಾದ್‌ ಮೇಯರ್‌ ಅಭಿಲಾಷ್‌ ಗುಪ್ತ ನಂದಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next