Advertisement

Cops Suspended: ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆ… ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತು

09:10 AM Dec 07, 2023 | Team Udayavani |

ರಾಜಸ್ಥಾನ: ರಾಷ್ಟ್ರೀಯ ರಜಪೂತ ಕರ್ಣಿ ಸೇನೆಯ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ಅವರನ್ನು ಜೈಪುರದಲ್ಲಿ ಗುಂಡಿಕ್ಕಿ ಕೊಂದ ಒಂದು ದಿನದ ಬಳಿಕ ಇಬ್ಬರು ರಾಜಸ್ಥಾನ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿ ರಾಜಸ್ಥಾನ ಪೊಲೀಸರು ಶ್ಯಾಮ್ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ (ಎಸ್‌ಎಚ್‌ಒ) ಮನೀಶ್ ಗುಪ್ತಾ ಮತ್ತು ಕಾನ್‌ಸ್ಟೆಬಲ್ ಮಹೇಶ್ ಅವರನ್ನು ಬುಧವಾರ ಅಮಾನತುಗೊಳಿಸಿದ್ದಾರೆ.

ಕಳೆದ ಮಂಗಳವಾರ ಇಬ್ಬರು ಅಪರಿಚಿತರು ಗೊಗಮೇಡಿ ಅವರ ನಿವಾಸಕ್ಕೆ ಬಂದು ಮಾತನಾಡುವ ನೆಪದಲ್ಲಿ ಮನಬಂದಂತೆ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದರು.

ಏತನ್ಮಧ್ಯೆ, ಆರೋಪಿಗಳ ಪೈಕಿ ಇಬ್ಬರು ಆರೋಪಿಗಳನ್ನು ರೋಹಿತ್ ರಾಥೋಡ್, ಮಕ್ರಾನಾ ನಾಗೌರ್ ನಿವಾಸಿ ಮತ್ತು ನಿತಿನ್ ಫೌಜಿ ಹರಿಯಾಣದ ಮಹೇಂದ್ರಗಾತ್ ನಿವಾಸಿ ಎಂದು ಗುರುತಿಸಿದ್ದಾರೆ.

ರಜಪೂತ ಕರ್ಣಿ ಸೇನೆಯ ಸದಸ್ಯರು ಭೋಪಾಲ್, ಇಂದೋರ್ ಮತ್ತು ಜಬಲ್‌ಪುರ ಸೇರಿದಂತೆ ಮಧ್ಯಪ್ರದೇಶದ ಹಲವು ನಗರಗಳಲ್ಲಿ ಸಂಘಟನೆಯ ಮುಖ್ಯಸ್ಥ ಸುಖದೇವ್ ಸಿಂಗ್ ಗೊಗಮೆಡಿ ಹತ್ಯೆಯನ್ನು ಖಂಡಿಸಿ ಬುಧವಾರ ಪ್ರತಿಭಟನೆ ನಡೆಸಿದರು.

Advertisement

ಇಂದು (ಗುರುವಾರ) ಬೆಳಗ್ಗೆ 7 ಗಂಟೆಗೆ ಜೈಪುರದ ರಜಪೂತ ಸಭಾ ಭವನದಲ್ಲಿ ಕರ್ಣಿ ಸೇನಾ ಮುಖ್ಯಸ್ಥರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಅವರ ಸ್ವಗ್ರಾಮ ಗೊಗಮೇಡಿಯಲ್ಲಿ ಅವರ ಅಂತಿಮ ಸಂಸ್ಕಾರ ನೆರವೇರಲಿದೆ.

ಗೊಗಮೇಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Vasundhara Raje: ಸಿಎಂ ಆಯ್ಕೆ ಕುತೂಹಲದ ನಡುವೆ ದಿಢೀರ್ ದಿಲ್ಲಿಗೆ ತೆರಳಿದ ವಸುಂಧರಾ ರಾಜೆ

Advertisement

Udayavani is now on Telegram. Click here to join our channel and stay updated with the latest news.

Next