Advertisement

ಎರಡು ಕಂಟೇನರ್‌ ಡಿಕ್ಕಿ:ಚಾಲಕರು ಸಜೀವ ದಹನ

11:39 AM May 04, 2019 | pallavi |

ವಿಜಯಪುರ: ಎರಡು ಕಂಟೇನರ್‌ ಲಾರಿಗಳ ಮಧ್ಯೆ ಮುಖಾಮುಖೀ ಡಿಕ್ಕಿ ಸಂಭವಿಸಿ ಎರಡೂ ವಾಹನಗಳ ಚಾಲಕರು ಸ್ಥಳದಲ್ಲೇ ಸಜೀವ ದಹನವಾದ ಘಟನೆ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಇಂಡಿ ತಾಲೂಕಿನ ಅಗಸಬಾಳ ಬಳಿ ಸಂಭವಿಸಿದೆ. ಘಟನೆಯಲ್ಲಿ ಒಂದು ಕಂಟೇನರ್‌ನಲ್ಲಿದ್ದ ಕ್ಲೀನರ್‌ ಪಾರಾಗಿದ್ದಾನೆ. ಹೊರ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತ ಪರಿಣಾಮ ಎನ್‌ಎಚ್ ಸಂಚಾರ ಸಂಪೂರ್ಣ ಬಂದ್‌ ಆಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next