ಉಡುಪಿ: ಸಂತೆಕಟ್ಟೆಯ ಪರಿತ್ಯಕ್ತ ಮಕ್ಕಳ ಬಾಳಿನ ಆಶಾಕಿರಣವಾದ ಕೃಷ್ಣಾನುಗ್ರಹ ಅರ್ಹ ಸಂಸ್ಥೆ ದತ್ತು ಸ್ವೀಕಾರ ಕೇಂದ್ರದಲ್ಲಿ ದತ್ತು ಪ್ರಕ್ರಿಯೆ ಮೂಲಕ ಇಬ್ಬರು ವಿಶೇಷ ಅಗತ್ಯ ತೆಯ ಮಕ್ಕಳನ್ನು ಇಟಲಿ ಹಾಗೂ ಇಂಗ್ಲೆಂಡ್ ದೇಶದ ಪೋಷಕರು ದತ್ತು ಪಡೆದರು.
2 ವರ್ಷದ ಹಿಂದೆ ಉಡುಪಿಯಲ್ಲಿ ಪೌರಕಾರ್ಮಿಕರಿಗೆ ಕಸದ ತೊಟ್ಟಿಯಲ್ಲಿ ಸಿಕ್ಕ ಮಗುವನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಆಶ್ರಮಕ್ಕೆ ಸೇರಿಸಿದ್ದರು. 2 ವರ್ಷಗಳಿಂದ ಆಶ್ರಮದ ಆರೈಕೆಯಲ್ಲಿದ್ದ ಮಗು ಇಂಗ್ಲೆಂಡ್‌ಗೆ ಮತ್ತು 4 ವರ್ಷಗಳಿಂದ ಆಶ್ರಮದಲ್ಲಿದ್ದ ವಿಶೇಷ ಅಗತ್ಯವುಳ್ಳ ಇನ್ನೊಂದು ಮಗು ಇಟೆಲಿಗೆ ಪ್ರಯಾಣ ಬೆಳೆಸಿವೆ.
ಆಶ್ರಮದಲ್ಲಿ ನಡೆದ ಹಸ್ತಾಂತರ ಪ್ರಕ್ರಿಯೆಯಲ್ಲಿ ಅಂಬಲಪಾಡಿ ದೇಗುಲದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್ ಅವರು ಮಕ್ಕಳು ಹಾಗೂ ಪೋಷಕರನ್ನು ಆಶೀರ್ವದಿಸಿ ದರು. ನ್ಯಾಯಾಧೀಶ ರವೀಂದ್ರ ದೇವಕಾರೆಪ್ಪ ಅರಿ ಅವರು ಅನಾಥ ಮಕ್ಕಳನ್ನು ಸಾಕಿ ಸಲಹುತ್ತಿರುವ ಸಂಸ್ಥೆಯನ್ನು ಪ್ರಶಂಸಿಸಿದರು.
ಮಕ್ಕಳ ಕಲ್ಯಾಣ ಸಮಿತಿಯ ನಿಕಟ ಪೂರ್ವಾ ಧ್ಯಕ್ಷ ಬಿ.ಕೆ. ನಾರಾಯಣ್, ಮಕ್ಕಳ ಹಕ್ಕು ವಿಶ್ವ ರಾಯಭಾರಿ ಡಾ| ವನಿತಾ ತೋರ್ವಿ, ನ್ಯಾಯ ವಾದಿ ಪ್ರಸಾದ್, ನಿತ್ಯಾನಂದ ಒಳಕಾಡು, ಸಂಸ್ಥೆಯ ಅಧ್ಯಕ್ಷ ಡಾ| ಉಮೇಶ್ ಪ್ರಭು ಉಪಸ್ಥಿತರಿದ್ದರು.