Advertisement
ಆಪರೇಷನ್ ಥಿಯೇಟರ್ ನ ಕಪಾಟಿನಲ್ಲಿ ಮಗಳ ಶವ ಪತ್ತೆಯಾಗಿದ್ದು, ನಂತರ ಹಾಸಿಗೆಯ ಕೆಳಗೆ ತಾಯಿಯ ಶವ ಪತ್ತೆಯಾಗಿದೆ. ಚಿಕಿತ್ಸೆಗಾಗಿ ತಾಯಿ ಮತ್ತು ಮಗಳು ಆಸ್ಪತ್ರೆಗೆ ಬಂದಿದ್ದರು ಎಂದು ಎಸಿಪಿ ಮಿಲಾಪ್ ಪಟೇಲ್ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
Related Articles
Advertisement
ಅಹಮದಾಬಾದ್ ನ ಕಗ್ಡಾಪಿತ್ ಪೊಲೀಸ್ ಠಾಣೆ ವ್ಯಾಪ್ತಿಯ ಭೂಲಾಭಾಯಿ ಪಾರ್ಕ್ ಬಳಿ ಇರುವ ಆಸ್ಪತ್ರೆಯೊಳಗೆ ಕೆಟ್ಟ ವಾಸನೆ ಬರುತ್ತಿದೆ ಎಂದು ನಮಗೆ ಮಾಹಿತಿ ಬಂದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯ ಆಪರೇಷನ್ ಥಿಯೇಟರ್ ಒಳಗಿದ್ದ ಕಪಾಟು ವಾಸನೆ ಬರುತ್ತಿದ್ದನ್ನು ಆಸ್ಪತ್ರೆಯ ಸಿಬ್ಬಂದಿ ಅದನ್ನು ತೆರೆದರು.
ಒಳಗೆ 30 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಬಳಿಕ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಮಾಹಿತಿ ನೀಡಿದ ಸ್ಥಳೀಯ ಪೊಲೀಸ್ ಠಾಣೆಯ ಸಿಬ್ಬಂದಿ ಆಸ್ಪತ್ರೆಗೆ ಧಾವಿಸಿದ್ದಾರೆ. ನಂತರ ಪೊಲೀಸರು ತನಿಖೆ ನಡೆಸಿ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.