ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ 18 ಸಾವಿರ ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ಪೊಲೀಸರು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡು ಆದೂರು ಕೈತೋಡು ಹೌಸಿನ ಕೆ.ಪಿ.ಬದ್ರುದ್ದೀನ್(33) ಮತ್ತು ಕರ್ನಾಟಕ ಪುತ್ತೂರಿನ ಅಬೂಬಕ್ಕರ್ ಸಿದ್ದಿಕ್(39)ನನ್ನು ಬಂಧಿಸಿದ್ದಾರೆ.
Advertisement
ಕಣ್ಣೂರು ಪಳಯಂಗಾಡಿ ರಸ್ತೆ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಆಲ್ಟೋ ಕಾರನ್ನು ತಪಾಸಣೆ ಮಾಡಿದಾಗ ತಂಬಾಕು ಉತ್ಪನ್ನಗಳು ಪತ್ತೆಯಾಯಿತು. 24 ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿತ್ತು.