ಬೆಂಗಳೂರು: ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಉಗ್ರವಾದ ಹೆಚ್ಚುತ್ತಿದ್ದರೂ ರಾಜ್ಯ ಸರ್ಕಾರ ಕಣ್ಮುಚ್ಚಿ ಕೂತಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಆರೋಪಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಳಸ ಪಟ್ಟಣದಲ್ಲಿ ಮಂಗಳವಾರ ಅಜೀಜ್ ಮತ್ತು ಆತನ ಸಹೋದರ, ಮೆಕ್ಯಾನಿಕ್ ಅಫಾÕ ಅಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಅಲ್ಲದೆ, ಅವರ ಮನೆಯಲ್ಲಿದ್ದ 40 ಸ್ಫೋಟಕ ಸಾಧನಗಳು, 40 ಜಿಲೆಟಿನ್ ಕಡ್ಡಿಗಳು, ಎರಡು ಪೆಟ್ರೋಲ್ ಬಾಂಬ್ ಹಾಗೂ ಮತ್ತಿತರೆ ವಸ್ತುಗಳನ್ನು ವಶಪಡಿಸಿಕೊಂಡಿರುವ ವರದಿಯಾಗಿದೆ.
ಮಲೆನಾಡು ಮತ್ತು ಕರಾವಳಿಯಲ್ಲಿ ಮತೀಯವಾದ ಮತ್ತು ಭಯೋತ್ಪಾದಕ ಚಟುವಟಿಕೆಗಳು ಹೆಚಾಗುತ್ತಿರುವ ಈ ದಿನಗಳಲ್ಲಿ ಸ್ಫೋಟಕಗಳು ಪತ್ತೆಯಾಗಿರುವುದು ಆತಂಕ ಸೃಷ್ಟಿಸಿದೆ ಎಂದು ಸಿ.ಟಿ.ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಸ್ಫೋಟಕಗಳು ಪತ್ತೆಯಾಗಿರುವುದು ಕಳವಳಕಾರಿ ವಿಷಯವಾಗಿದೆ ಎಂದರು. ಸರ್ಕಾರ ಕಠಿಣ ಕ್ರಮ ತೆಗೆದುಕೊಂಡಿದ್ದರೆ ಈ ಶಕ್ತಿಗಳನ್ನು ಮಟ್ಟಹಾಕಿ, ಶಸ್ತ್ರಾಸ್ತ, ಸ್ಫೋಟಕ ಪೂರೈಸುವವರನ್ನು ನಿಗ್ರಹಿಸಬಹುದಾಗಿತ್ತು.
ಕರಾವಳಿಯು ಗಡಿ ಇದ್ದಂತೆ. ಅದೇ ಗಡಿಯಿಂದ ಶಸ್ತ್ರಾಸ್ತ್ರಗಳು ಪೂರೈಕೆಯಾಗುತ್ತಿರುವ ಸಾಧ್ಯತೆ ಇದೆ. ದೇಶದ ಭದ್ರತೆ ವಿಷಯವೂ ಆಗಿದೆ. ಭಯೋತ್ಪಾದಕರಿಗೆ ಕರಾವಳಿ, ಒಳನುಸುಳುವ ಮಾರ್ಗವಾಗಿರಬಹುದಾದ ಸಾಧ್ಯತೆ ಇದೆ.
ಹೀಗಾಗಿ ರಾಜ್ಯ ಸರ್ಕಾರ, ಮತೀಯ ಶಕ್ತಿಗಳನ್ನು ಮತ ಬ್ಯಾಂಕ್‌ಗೆ ಬಳಸಿಕೊಳ್ಳುವುದನ್ನು ಬಿಟ್ಟು, ಈ ಶಕ್ತಿಗಳ ಹಿಂದಿರುವ ಜಾಲ ಭೇದಿಸಬೇಕು ಎಂದು ಆಗ್ರಹಿಸಿದರು.