Advertisement

ಹಳೆ ನೋಟು ಬದಲಾವಣೆಗೆ ಪ್ರಯತ್ನಿಸಿದ ಇಬ್ಬರ ಬಂಧನ

12:17 PM Mar 24, 2017 | |

ಬೆಂಗಳೂರು: ಅಮಾನ್ಯಗೊಂಡ ನೋಟುಗಳನ್ನು ಬದಲಾವಣೆ ಮಾಡಲು ರಿಯಲ್‌ ಎಸ್ಟೇಟ್‌ ಏಜೆಂಟರು ಪ್ರಯತ್ನಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು ಇಬ್ಬರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಹಳೆಯ 500 ಮತ್ತು 1000 ಮುಖ ಬೆಲೆಯ 1.28 ಕೋಟಿ ರುಪಾಯಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಪ್ರವೀಣ್‌ ಸೂದ್‌ ತಿಳಿಸಿದ್ದಾರೆ. 

Advertisement

ಕೊಡಗಿನ ವಿರಾಜಪೇಟೆಯ ಜಿಮ್ಮಿ ರಾಹುಲ್‌ (34) ಮತ್ತು ಉತ್ತರ ಕನ್ನಡದ ಹೊನ್ನಾವರದ ಅಜಯ್‌ ಬಿನಶೋಕ್‌ (26) ಬಂಧಿತರು. ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ಪಡೆದಿದ್ದ ದಾಖಲೆಗಳಿಲ್ಲದ ಹಣವನ್ನು ಬ್ಯಾಂಕ್‌ಗೆ ಪಾವತಿಸಲಾಗದೇ ಬದಲಾವಣೆ ಮಾಡಿಸಿಕೊಳ್ಳಲು ಇಬ್ಬರೂ ಯತ್ನಿಸಿದ್ದರು.

ಶೇಷಾದ್ರಿಪುರ ಬಳಿಯ ಪೈಪ್‌ಲೈನ್‌ ರಸ್ತೆಯಲ್ಲಿರುವ ಜುಲ್ತಾ ಸೂರ್ಯ ಎಲೈಟ್‌ ಅಪಾರ್ಟಮೆಂಟ್‌ನಲ್ಲಿರುವ ರಿಷಿ ಜೈನ್‌ ಚಾರ್ಟೆಡ್‌ ಅಕೌಂಟೆಂಟ್‌ ಕಚೇರಿಯಲ್ಲಿ ನೋಟುಗಳ ಬದಲಾವಣೆಗೆ ಯತ್ನಿಸಿದ್ದರು. ಈ ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.

ಇನ್ನಷ್ಟು ಮಂದಿ: ಹಳೇ ನೋಟು ಗಳನ್ನು ಹೊಂದಿರುವ ರಿಯಲ್‌ ಎಸ್ಟೇಟ್‌ ಉದ್ಯಮಿಗಳು ಹಾಗೂ ಇತರೆ ಪಾನ್‌ಬ್ರೋಕರ್‌ಗಳು ನಗರದಲ್ಲಿ ಇನ್ನಷ್ಟು ಮಂದಿ ಇದ್ದು, ನೋಟುಗಳ ಬದಲಾವಣೆಗೆ ಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯಿದೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳು ಅಂತಹ ವ್ಯಕ್ತಿಗಳ ಮೇಲೆ ನಿಗಾವಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next