Advertisement

ಅಕ್ರಮ ಪಡಿತರ ಅಕ್ಕಿ ಸಾಗಣೆ ಇಬ್ಬರ ಬಂಧನ

09:59 AM Aug 30, 2019 | sudhir |

ಬೀದರ: ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಹುಮನಾಬಾದ ತಾಲೂಕಿನ ಮನ್ನಾಎಖ್ಖೆಳ್ಳಿ ಪೊಲೀಸರು 125 ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

ಗುಜರಾತ್ ಮೂಲದ ಮಿರಾಬನ್‌ಭಾಯಿ ಮತ್ತು ಅವುರಾಭಾಯಿ ಬಂಧಿತರು. ರೂ.೩.೫ಲಕ್ಷ ಮೊತ್ತದ ತಲಾ 50ಕೆ.ಜಿ ಬ್ಯಾಗ್‌ಗಳಿದ್ದು, ಒಟ್ಟು 250 ಬ್ಯಾಗ್‌ಗಳು ವಶಪಡಿಸಿಕೊಳ್ಳಲಾಗಿದೆ. 125ಕ್ವಿಂಟಲ್ ಅಕ್ಕಿಯನ್ನು ಅಕ್ರಮವಾಗಿ ಗುಜರಾತ್‌ಗೆ ಸಾಗಿಸುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಮನ್ನಾಎಖ್ಖೆಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next