ಉಡುಪಿ: ನಗರದಲ್ಲಿ ಆಟೋ ರಿಕ್ಷಾದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸೆನ್ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿ ಅವರ ಬಳಿ ಇದ್ದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳನ್ನು ಸೋಮೇಶ್ವರದ ನಿವಾಸಿ ಕಾರ್ತಿಕ್ ದೇವಾಡಿಗ (24) ಮತ್ತು ತೇಜಸ್ ಪೂಜಾರಿ (18) ಎಂದು ಗುರುತಿಸಲಾಗಿದೆ.
ಆರೋಪಿಗಳ ಬಳಿ ಇದ್ದ 1ಕಿಲೋ 226 ಗ್ರಾಂ ಗಾಂಜಾ ಮತ್ತು ಎರಡು ಮೊಬೈಲ್ ಫೋನ್ ಮತ್ತು ಆಟೋ ರಿಕ್ಷಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡಿರುವ ಸ್ವತ್ತುಗಳ ಒಟ್ಟು ಮೌಲ್ಯ 1.35 ಲ.ರೂ. ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮಲ್ಪೆ: ಸ್ಥಳೀಯರ ಎಚ್ಚರಿಕೆಗೆ ಕಿವಿಗೊಡದೆ ನೀರಿಗಿಳಿದ ಯುವತಿ ಸಮುದ್ರಪಾಲು, ಮೂವರ ರಕ್ಷಣೆ
ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಎನ್.ವಿಷ್ಣುವರ್ಧನ್ ಅವರ ನಿರ್ದೇಶನದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ ಚಂದ್ರ ಮಾರ್ಗದರ್ಶನದಲ್ಲಿ ಉಡುಪಿ ಸೆನ್ ಅಪರಾಧ ದಳದ ನಿರೀಕ್ಷಕರಾದ ಮಂಜುನಾಥ್ ಹಾಗೂ ಅವರ ತಂಡದ ಪಿ.ಎಸ್.ಐ. ಲಕ್ಷಣ್, ಎ.ಎಸ್.ಐ. ಕೇಶವ್ ಗೌಡ ಮತ್ತು ಸಿಬಂದಿಗಳಾದ ಕೃಷ್ಣಪ್ರಸಾದ್, ಪ್ರವೀಣ್, ರಾಘವೇಂದ್ರ ಉಪ್ಪೂರು, ಪ್ರಸನ್ನ ಸಾಲ್ಯಾನ್ ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.