Advertisement

ಬಾಲಿವುಡ್‌ ನಟಿ ಸೋನಂ ಮನೆ ಕಳ್ಳತನದ ಆರೋಪಿಗಳ ಬಂಧನ

08:46 PM Apr 13, 2022 | Team Udayavani |

ನವದೆಹಲಿ: ಬಾಲಿವುಡ್‌ ನಟಿ ಸೋನಂ ಕಪೂರ್‌ರವರ ದೆಹಲಿ ನಿವಾಸದಲ್ಲಿ ನಡೆದಿದ್ದ 24 ಕೋಟಿ ರೂ. ಮೌಲ್ಯದ ಆಭರಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಶುಶ್ರೂಷಕಿ ಹಾಗೂ ಆಕೆಯ ಪತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

Advertisement

ದೆಹಲಿಯ ಅಮೃತಾ ಶೆರ್ಗಿಲ್‌ ಮಾರ್ಗ್‌ನಲ್ಲಿ ಇದ್ದ ಭವ್ಯ ಬಂಗಲೆಯಲ್ಲಿ ಸೋನಂ ಅವರ ಪತಿಯ ತಾಯಿ ಒಬ್ಬರೇ ಇರುತ್ತಿದ್ದರಿಂದ ಅವರನ್ನು ನೋಡಿಕೊಳ್ಳಲು ಅಪರ್ಣಾ ರುದ್‌ ವಿಲ್ಸನ್‌ ಎಂಬ ಶುಶ್ರೂಷಕಿಯನ್ನು ನೇಮಿಸಲಾಗಿತ್ತು.

ಆಕೆ, ತನ್ನ ಪತಿಯ ಸಹಕಾರದಿಂದ ಫೆ. 11ರಂದು ಕಳ್ಳತನ ಮಾಡಿದ್ದಳೆಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಹಿಜಾಬ್ ತೀರ್ಪಿಗೆ ಬೆದರಿಕೆ : ಆರೋಪಿ ಮನವಿಯ ಮೇಲೆ ಪ್ರತಿಕ್ರಿಯೆ ಕೇಳಿದ ಸುಪ್ರೀಂ

 

Advertisement
Advertisement

Udayavani is now on Telegram. Click here to join our channel and stay updated with the latest news.

Next