Advertisement

ಎರಡು ಪ್ರದೇಶ ಸೀಲ್‌ಡೌನ್‌

03:37 PM Apr 20, 2020 | Suhan S |

ಜಮಖಂಡಿ: ನಗರದಲ್ಲಿ ಶನಿವಾರ ಬ್ಯಾಂಕ್‌ ಸೆಕ್ಯೂಟರಿ ಗಾರ್ಡ್‌ ಮತ್ತು ಸೆಂಟ್ರಂಗ್‌ ಗುತ್ತಿಗೆದಾರ ಸೇರಿದಂತೆ ಇಬ್ಬರು ವ್ಯಕ್ತಿಗಳಲ್ಲಿ ಕೋವಿಡ್ 19 ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ನಗರದ ಜನತಾ ಬಜಾರ ರಸ್ತೆಯಿಂದ ಡಾ| ಅಂಬೇಡ್ಕರ್‌ ವೃತ್ತದವರೆಗೆ ಮತ್ತು ನಗರದ ಶಾಲಂ ಗೇಟ್‌ದಿಂದ ಅವಟಿ ಗಲ್ಲಿ ಸಹಿತ 3 ಕಿ.ಮೀ ವ್ಯಾಪ್ತಿಯಲ್ಲಿ ಬರತಕ್ಕ ಎಲ್ಲ ರಸ್ತೆಗಳನ್ನು ತಾಲೂಕಾಡಳಿತ ಸೀಲ್‌ ಡೌನ್‌ ಮಾಡಿದೆ.

Advertisement

ನಗರದ ಬ್ಯಾಂಕ್‌ ಸೆಕ್ಯೂರಟಿ ಗಾರ್ಡ್‌ ಹುದ್ದೆಯಲ್ಲಿರುವ ಕೋವಿಡ್‌ ಸೋಂಕಿತ ರೋಗಿ ನಂ.373 ವ್ಯಕ್ತಿಗೆ ಸೋಂಕು ಪತ್ತೆಯಾಗಿದ್ದು, ಪ್ರಾಥಮಿಕ ಹಂತದಲ್ಲಿ ಅವನೊಂದಿಗೆ ಕುಟುಂಬದ 7 ಸದಸ್ಯರು ಮತ್ತು 26 ಜನ ಸಹಿತ ಒಟ್ಟು 33 ಜನರೊಂದಿಗೆ ಸಂಪರ್ಕ ಹೊಂದಿದ್ದಾನೆ. ನಗರದ ಅವಟಿ ಗಲ್ಲಿ ಸೆಂಟ್ರಿಂಗ್‌ ಗುತ್ತಿಗೆದಾರನಾಗಿ ಕೆಲಸ ಮಾಡುತ್ತಿರುವ ಕೋವಿಡ್‌ ಸೋಂಕಿತ ರೋಗಿ ನಂ.381 ವ್ಯಕ್ತಿಗೆ ಪ್ರಾಥಮಿಕ ಹಂತದಲ್ಲಿ ಕುಟುಂಬದ 6 ಸದಸ್ಯರು ಮತ್ತು 26 ಜನ ಸಹಿತ 32 ಜನರೊಂದಿಗೆ ಸಂಪರ್ಕ ಹೊಂದಿದ್ದಾನೆ ಪ್ರಾಥಮಿಕ ವರದಿ ಬಂದಿದೆ. ಆರೋಗ್ಯ ಇಲಾಖೆ ಮತ್ತು ನಗರಸಭೆ ಕಾರ್ಮಿಕರು ಕೊರೊನಾ ಸೋಂಕಿತ ವ್ಯಕ್ತಿಗಳ ಮನೆ ಸುತ್ತಮುತ್ತಲಿನ ಸಂಪರ್ಕ ರಸ್ತೆಗಳನ್ನು ಸ್ವತ್ಛಗೊಳಿಸುವ ಮೂಲಕ ರಾಸಾಯನಿಕ ಔಷ ಧಿ ಸಿಂಪರಣೆ ಮಾಡಿದ್ದು, ಅವರನ್ನು ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ಪೊಲೀಸ್‌ ಇಲಾಖೆ ನಗರದಲ್ಲಿ ಭದ್ರತೆ ಮತ್ತಷ್ಟು ಹೆಚ್ಚಿಸಿದೆ. ಪ್ರಾಥಮಿಕ ಹಂತದಲ್ಲಿ ಸೋಂಕಿತ 65 ಜನರನ್ನು ನಗರದ ಸರಕಾರಿ ವಸತಿ ನಿಲಯದಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ| ಜಿ.ಎಸ್‌. ಗಲಗಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next