Advertisement
10 ಕೋಟಿ ಬಳಕೆದಾರರು ಸೇರ್ಪಡೆಥ್ರೆಡ್ಸ್ ಅನ್ನು ಜುಕರ್‌ಬರ್ಗ್ ಬಿಡುಗಡೆ ಮಾಡಿದ್ದೇ ತಡ ಸರಸರನೆ ಡೌನ್‌ಲೋಡ್ ಆಗಿದೆ.ಬಿಡುಗಡೆ ಮಾಡಿದ ದಿನ ಕೇವಲ 7 ಗಂಟೆಗಳಲ್ಲಿ 1 ಕೋಟಿ ಬಳಕೆದಾರರು ಸೇರ್ಪಡೆಗೊಂಡಿದ್ದರು. ಈಗ ಐದು ದಿನದಲ್ಲಿ 10 ಕೋಟಿ ಬಳಕೆದಾರರು ಸೇರ್ಪಡೆಯಾಗಿದ್ದಾರೆ. ಇದಕ್ಕೆ ವಿಶೇಷ ಕಾರಣವೆಂದರೆ ಇನ್‌ಸ್ಟಾಗ್ರಾಂ ಬಳಕೆದಾರರು ನೇರವಾಗಿ ಥ್ರೆಡ್ಸ್ ಸೇರಿಕೊಳ್ಳಲು ಅವಕಾಶವಿರುವುದು. ಥ್ರೆಡ್ಸ್ ನಲ್ಲಿ ಖಾತೆ ಸೃಷ್ಟಿಸುವಾಗ ಇನ್‌ಸ್ಟಾದ ಅಷ್ಟೂ ಮಾಹಿತಿಗಳನ್ನು ಸಹಜವಾಗಿ ಎಳೆದುಕೊಳ್ಳಬಹುದು.
-ಟ್ವಿಟರ್‌ನಲ್ಲಿ ಒಮ್ಮೆಗೆ 280 ಅಕ್ಷರಗಳನ್ನು ಬರೆಯಬಹುದು. ಥ್ರೆಡ್ಸ್ ನಲ್ಲಿ 500 ಅಕ್ಷರಗಳಿಗೆ ಅವಕಾಶವಿದೆ.
-ಇನ್‌ಸ್ಟಾದಲ್ಲಿ ನಿಮಗೆ ಅಧಿಕೃತ ಖಾತೆಯಿದ್ದರೆ, ಆ ಅಧಿಕೃತ ಬ್ಲೂಟಿಕ್ ಅನ್ನು ಥ್ರೆಡ್ಸ್ ಗೂ ಬಳಸಬಹುದು. ಆದರೆ ಟ್ವಿಟರ್‌ನಲ್ಲಿ ಅಧಿಕೃತತೆಗೆ ತಿಂಗಳಿಗೆ 8 ಡಾಲರ್ ನೀಡಬೇಕು! ಹಣ ಕೊಟ್ಟವರು ಒಮ್ಮೆಗೆ 25,000 ಅಕ್ಷರ ಬರೆಯಲು ಟ್ವಿಟರ್ ಅವಕಾಶ ನೀಡಿದೆ.
-ಥ್ರೆಡ್ಸ್ ನಲ್ಲಿ ಖಾತೆ ಬೇಕೆಂದರೆ ಇನ್‌ಸ್ಟಾಗ್ರಾಂನಲ್ಲೂ ಒಂದು ಖಾತೆಯಿರಬೇಕಾಗುತ್ತದೆ. ಇನ್‌ಸ್ಟಾದಿಂದ ಬಳಕೆದಾರರು, ಪ್ರೊಫೈಲ್ ವಿವರಗಳನ್ನು ನೇರ ಎಳೆದುಕೊಳ್ಳಬಹುದು.
-ಥ್ರೆಡ್ಸ್ ನಲ್ಲಿ 5 ನಿಮಿಷಗಳ ವೀಡಿಯೋ ಪೋಸ್ಟ್ ಮಾಡಬಹುದು. ಬ್ಲೂಟಿಕ್ ಇಲ್ಲದ ಟ್ವಿಟರ್ ಬಳಕೆದಾರರು 2 ನಿಮಿಷ 20 ಸೆಕೆಂಡ್‌ಗಳ ವೀಡಿಯೋ ಮಾತ್ರ ಪೋಸ್ಟ್ ಮಾಡಲು ಸಾಧ್ಯ.
-ಥ್ರೆಡ್ಸ್ ನಲ್ಲಿ ಪೋಸ್ಟ್ ಅನ್ನು ಕರಡು ರೂಪದಲ್ಲಿ (ಡ್ರಾಫ್ಟ್) ಮಾಡಿಟ್ಟುಕೊಳ್ಳಲು ಅವಕಾಶವಿಲ್ಲ. ಟ್ವಿಟರ್‌ನಲ್ಲಿ ಆ ಅವಕಾಶವಿದೆ.
-ಇತರ ಖಾತೆಗಳನ್ನು ಬ್ಲಾಕ್ ಮಾಡಲು, ಮ್ಯೂಟ್ ಮಾಡಲು ಇನ್‌ಸ್ಟಾದಲ್ಲಿ ಇರುವ ನಿಯಮಗಳೇ ಇಲ್ಲೂ ಅನ್ವಯವಾಗುತ್ತವೆ.
-ಸದ್ಯ ಆ್ಯಪ್ ಸ್ಟೋರ್, ಪ್ಲೇಸ್ಟೋರ್‌ನಲ್ಲಿ ಮಾತ್ರ ಥ್ರೆಡ್ಸ್ ಲಭ್ಯವಿದೆ. ವೆಬ್ ಮಾದರಿಯಲ್ಲಿ ಈಗ ಲಭ್ಯವಿಲ್ಲ.
-ಥ್ರೆಡ್ಸ್ ಖಾತೆಯನ್ನು ಅಳಿಸಲು ಸಾಧ್ಯವಿಲ್ಲ, ಬೇಕಿದ್ದರೆ ನಿಷ್ಕ್ರಿಯ ಮಾಡಬಹುದು. ಒಂದು ವೇಳೆ ಥ್ರೆಡ್ಸ್ ಪ್ರೊಫೈಲನ್ನು ಅಳಿಸಬೇಕಿದ್ದರೆ, ಇನ್‌ಸ್ಟಾ ಖಾತೆಯನ್ನೇ ಅಳಿಸಬೇಕಾಗುತ್ತದೆ.
Related Articles
ವಿಚಿತ್ರವೆಂದರೆ ಕಳೆದ ಒಂದು ದಶಕದಲ್ಲೇ ಮೊದಲ ಬಾರಿಗೆ ಜುಕರ್‌ಬರ್ಗ್ ಟ್ವೀಟ್ ಮಾಡಿದ್ದರು. ಅವರು ಒಂದೇ ರೀತಿಯ ಇಬ್ಬರು ಸ್ಪೈಡರ್‌ಮ್ಯಾನ್‌ಗಳು ಪರಸ್ಪರ ಕುಸ್ತಿಗೆ ಸಜ್ಜಾಗಿರುವ ಚಿತ್ರ ಹಾಕಿದ್ದರು.
Advertisement
ಎಲಾನ್ ಮಸ್ಕ್ ಲೇವಡಿಟ್ವಿಟರ್ ಅನ್ನುಥ್ರೆಡ್ಸ್ ನಕಲು ಮಾಡಿದೆ, ಕೇವಲ ಕಾಪಿ, ಪೇಸ್ಟ್ ಕೆಲಸ ಎಂದು ಟ್ವಿಟರ್ ಮಾಲಕ ಎಲಾನ್ ಮಸ್ಕ್ ಲೇವಡಿ ಮಾಡಿದ್ದಾರೆ.