Advertisement
ಪಾಕಿಸ್ಥಾನ, ಖಲಿಸ್ಥಾನ ಪರವಾಗಿ ಮೃದು ಧೋರಣೆ ಹೊಂದಿ, ದ್ವೇಷಪೂರಿತ ಪೋಸ್ಟ್ ಹಾಕುತ್ತಿದ್ದ 1435 ಖಾತೆಗಳ ವಿರುದ್ಧ ಕ್ರಮ ಜರಗಿಸುವಂತೆ ಕೇಂದ್ರ ಸರಕಾರ ಸೂಚಿಸಿತ್ತು. ಇವುಗಳಲ್ಲಿ 1398 ಖಾತೆಗಳನ್ನು ಟ್ವಿಟರ್ ಬ್ಲಾಕ್ ಮಾಡಿದೆ. ಆದಾಗ್ಯೂ ಸರಕಾರ ನಿರ್ಬಂಧಿಸಲು ಸೂಚಿಸಿದ್ದ ಸಿಪಿಎಂ ಮುಖಂಡ ಮೊಹಮ್ಮದ್ ಸಲೀಮ್ ಮತ್ತು ಕಾರವಾನ್ ಮ್ಯಾಗಜಿನ್‌ನ ಖಾತೆಗಳು ಈಗಲೂ ಕಾರ್ಯನಿರ್ವಹಿಸುತ್ತಿದ್ದು, ಇವೂ ಸೇರಿದಂತೆ ಬಾಕಿ 37 ಖಾತೆಗಳ ವಿರುದ್ಧ ತನಿಖೆ ಮುಂದುವರಿದಿದೆ.
Related Articles
Advertisement
ಸುಪ್ರೀಂ ಸೂಚನೆ: ನಕಲಿ ಖಾತೆ ತೆರೆದು ದ್ವೇಷದ ಪೋಸ್ಟ್‌ಗಳನ್ನು ಹಾಕುತ್ತಿರುವವರ ವಿರುದ್ಧ ನಿಯಮಾವಳಿ ರೂಪಿಸುವಂತೆ ಸೂಚಿಸಿ, ಸುಪ್ರೀಂ ಟ್ವಿಟರ್ ಮತ್ತು ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ. ಗಣ್ಯವ್ಯಕ್ತಿಗಳೂ ಸೇರಿದಂತೆ ಹಲವರ ಹೆಸರಿನಲ್ಲಿ ಫೇಸ್‌ಬುಕ್, ಟ್ವಿಟರ್‌ನಲ್ಲಿ ನಕಲಿ ಖಾತೆಗಳು ದ್ವೇಷದ ಪೋಸ್ಟ್ ಹಾಕುತ್ತಿವೆ. ಇವುಗಳ ನಿಯಂತ್ರಣಕ್ಕೆ ಕ್ರಮ ರೂಪಿಸಬೇಕು ಎಂದು ಆಗ್ರಹಿಸಿ ವಿನೀತ್ ಗೋಯೆಂಕಾ ಎಂಬ ಅವರು ಅರ್ಜಿ ಸಲ್ಲಿಸಿದ್ದರು. ಸುಪ್ರೀಂನ ಮುಖ್ಯ ನ್ಯಾ| ಎಸ್.ಎ. ಬೋಬೆx ನೇತೃತ್ವದ ಪೀಠ ಅರ್ಜಿ ವಿಚಾರಣೆ ನಡೆಸಿತ್ತು.
ಭಾರತದಲ್ಲಿ 3.5 ಕೋಟಿ ಟ್ವಿಟರ್ ಖಾತೆ, 35 ಕೋಟಿಗೂ ಅಧಿಕ ಫೇಸ್‌ಬುಕ್ ಖಾತೆಗಳಿವೆ. ಈ ಪೈಕಿ ಟ್ವಿಟರಿನಲ್ಲಿ ಕನಿಷ್ಠ 35 ಲಕ್ಷ, ಫೇಸ್‌ಬುಕ್‌ನಲ್ಲಿ 3.5 ಕೋಟಿ ನಕಲಿ ಖಾತೆಗಳಿವೆ ಎಂದು ಅರ್ಜಿಯಲ್ಲಿ ಆಪಾದಿಸಲಾಗಿತ್ತು.
ಲೇಬಲ್ ಪಟ್ಟಿಯಲ್ಲಿ ಭಾರತ ಇಲ್ಲ :
ಸರಕಾರದ ಪ್ರಮುಖ ವ್ಯಕ್ತಿಗಳು ಮತ್ತು ಅದಕ್ಕೆ ಸೇರಿಕೊಂಡ ಸಂಸ್ಥೆಗಳು ಹೊಂದಿರುವ ಖಾತೆಗಳನ್ನು ದೃಢಪಡಿ ಸುವ ನಿಟ್ಟಿನಲ್ಲಿ ವಿಶೇಷ ಲೇಬಲ್ ಹೊಂದಲು ಟ್ವಿಟರ್ ತೀರ್ಮಾನಿಸಿದೆ. ಕೆನಡಾ, ಕ್ಯೂಬಾ ಸೇರಿದಂತೆ 17 ರಾಷ್ಟ್ರಗ ಳಲ್ಲಿ ಫೆ.17ರಿಂದ ಅಂಶ ಜಾರಿಯಾಗ ಲಿದೆ. ಗಮನಾರ್ಹ ಅಂಶವೆಂದರೆ ಈ ಪಟ್ಟಿಯಲ್ಲಿ ಭಾರತ ಸೇರ್ಪಡೆಯಾಗಿಲ್ಲ. ಕಳೆದ ವರ್ಷದ ಆಗಸ್ಟ್‌ನಿಂದ ಈ ವ್ಯವಸ್ಥೆ ಜಾರಿಯಾಗಿದೆ.