ನವದೆಹಲಿ: 2022ರಲ್ಲಿ ಭಾರತದಲ್ಲಿ ದೊಡ್ಡ ಮಟ್ಟದ ಉದ್ಯೋಗ ಕಡಿತಗೊಳಿಸಿದ್ದ ಟ್ವಿಟರ್ ಇದೀಗ ತನ್ನ ಕಛೇರಿಗಳನ್ನೂ ಮುಚ್ಚುತ್ತಿರುವ ಮಾಹಿತಿ ಹೊರಬಿದ್ದಿದೆ. ಭಾರತದಲ್ಲಿರುವ ಟ್ವಿಟರ್ ಕಂಪನಿಯ ಮೂರು ಕಛೇರಿಗಳ ಪೈಕಿ ಎರಡನ್ನು ಮುಚ್ಚುತ್ತಿದ್ದು ತನ್ನ ಉದ್ಯೋಗಿಗಳನ್ನು ವರ್ಕ್ ಫ್ರಮ್ ಹೋಮ್‌ಗೆ ಕಳುಹಿಸಿದೆ.
ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ದೈತ್ಯ ಸಾಮಾಜಿಕ ಜಾಲತಾಣ ಭಾರೀ ಆರ್ಥಿಕ ಹೊಡೆತಕ್ಕೆ ಸಿಲುಕಿದೆ. ಈ ಹಿಂದೆ ಭಾರತದಲ್ಲೇ ಸುಮಾರು 200ಕ್ಕೂ ಹೆಚ್ಚಿದ್ದ ತನ್ನ ಉದ್ಯೋಗಿಗಳ ಪೈಕಿ ಬರೋಬ್ಬರಿ ಶೇ.90 ರಷ್ಟು ಉದ್ಯೋಗಿಗಳನ್ನು ಕೈಬಿಟ್ಟಿದ್ದ ಟ್ವಿಟರ್ ಇದೀಗ ಮತ್ತೊಂದು ಮಹತ್ವದ ನಿರ್ಧಾರಕ್ಕೆ ಕೈ ಹಾಕಿದೆ.
ಭಾರತದಲ್ಲಿರುವ ತನ್ನ 3 ಕಛೇರಿಗಳ ಪೈಕಿ ದೆಹಲಿ ಮತ್ತು ವಾಣಿಜ್ಯ ನಗರಿ ಮುಂಬಯಿಯಲ್ಲಿರುವ ಕಛೇರಿಗಳನ್ನು ಮುಚ್ಚಲಾಗುತ್ತದೆ ಎಂದು ಹೇಳಿದೆ. ಅಲ್ಲದೇ ಸಿಲಿಕಾನ್ ಸಿಟಿ ಬೆಂಗಳೂರಲ್ಲೂ ಟ್ವಿಟರ್ ತನ್ನ ಕಛೇರಿಯನ್ನು ಹೊಂದಿದ್ದು ಅಲ್ಲಿನ ಕಛೇರಿ ಯಥಾವತ್ತಾಗಿ ಕಾರ್ಯನಿರ್ವಹಿಸುತ್ತದೆಯಾದರೂ ಕೇವಲ ಅಗತ್ಯವಿರುವ ಸಿಬ್ಬಂದಿಗಳಿಗೆ ಮಾತ್ರ ಕಛೇರಿಗೆ ಬರುವಂತೆ ತಿಳಿಸಿದೆ.
ದೆಹಲಿ, ಮುಂಬೈ ಮಾತ್ರವಲ್ಲದೇ ಈ ಹಿಂದೆ ತನ್ನ ಕಛೇರಿಯ ದುಬಾರಿ ಬಾಡಿಗೆಯನ್ನು ತೆರಲಾಗದೇ ಟ್ವಿಟರ್ ತನ್ನ ಸಾನ್ ಫ್ರಾನ್ಸಿಸ್ಕೋ ಮತ್ತು ಲಂಡನ್‌ನಲ್ಲಿರುವ ಕಛೇರಿಗಳನ್ನೂ ಮುಚ್ಚಿತ್ತು.3
ಇದನ್ನೂ ಓದಿ:
Karnataka Budget: ರಾಜ್ಯದ ಹಣಕಾಸು ಪರಿಸ್ಥಿತಿ ಹೇಗಿದೆ, GST, ತೆರಿಗೆ ಸಂಗ್ರಹ ಎಷ್ಟಾಗಿದೆ?