Advertisement

ತುಳು ಭಾಷೆಯ ಅಧಿಕೃತ ಮಾನ್ಯತೆಗಾಗಿ ಟ್ವೀಟರ್‌ನಲ್ಲಿ ಆಗ್ರಹ ಅಭಿಯಾನ

10:20 AM Sep 09, 2019 | Hari Prasad |

ಮಂಗಳೂರು: ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಚೇದಕ್ಕೆ ಸೇರಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿ ಟ್ವೀಟರ್‌ ನಲ್ಲಿ ಅಭಿಯಾನ ಪ್ರಾರಂಭಗೊಂಡಿದೆ. ಈ ಹಿಂದೆಯೂ ಹಲವಾರು ಸಂದರ್ಭಗಳಲ್ಲಿ ಈ ರೀತಿಯ ಆಂದೋಲನಗಳು ನಡೆದಿತ್ತು. ಇದೀಗ ತುಳು ಭಾಷಿಕರ ಈ ಹೋರಾಟಕ್ಕೆ ರಾಜ್ಯದ ಇತರ ಕಡೆಯಿಂದಲೂ ಭಾರೀ ಬೆಂಬಲ ವ್ಯಕ್ತವಾಗಿದೆ.

Advertisement


ಈ ಹಿಂದಿನ ಎಲ್ಲಾ ಸರಕಾರಗಳು ತುಳುವನ್ನು ಕಡೆಗಣಿಸುತ್ತಲೇ ಬಂದಿದ್ದು, ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜನರ ಮನವಿಗಳಿಗೆ ಬೆಂಬಲ ಲಭಿಸಿರಲಿಲ್ಲ. ಇದೀಗ ಮತ್ತೆ, ತುಳು ಭಾಷೆಯನ್ನು ಅಧಿಕೃತ ಭಾಷೆಯಾಗಿ ಪರಿಗಣಿಸಬೇಕೆಂಬ ತುಳುವರ  ಆಗ್ರಹಕ್ಕೆ ಇದೀಗ ಟ್ವೀಟರ್‌ ಅಭಿಯಾನದ ಮೂಲಕ ಸೋಷಿಯಲ್ ಮೀಡಿಯಾ ಹೋರಾಟದ ಸ್ಪರ್ಶ ದೊರೆತಂತಾಗಿದೆ


ತುಳು ಭಾಷಿಕರ ಹೋರಾಟಕ್ಕೆ ಜನಪ್ರತಿನಿಧಿಗಳು, ಚಿತ್ರ ನಟರ ಬೆಂಬಲ
ತುಳು ಭಾಷೆಯ ಅಧಿಕೃತ ಸ್ಥಾನಮಾನಕ್ಕಾಗಿ ಟ್ವೀಟರ್‌ನಲ್ಲಿ ನಡೆಯುತ್ತಿರುವ ಅಭಿಯಾನಕ್ಕೆ ಕನ್ನಡ ಮತ್ತು ತುಳು ಭಾಷೆಯ ಚಿತ್ರ ನಟರು ಹಾಗೂ ಜನಪ್ರತಿನಿಧಿಗಳು ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಚಿತ್ರನಟರಾಗಿರುವ ತುಳುನಾಡಿನವರೇ ಆಗಿರುವ ನಟ ರಕ್ಷಿತ್‌ ಶೆಟ್ಟಿ ಸೇರಿದಂತೆ ಕನ್ನಡದ ಜನಪ್ರಿಯ ನಟ  ಜಗ್ಗೇಶ್‌ ಅವರೂ ಸಹ ಈ ಅಭಿಯಾನಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

#ತುಳು ಸಹೋದರರೆ ಉಸಾರ್ ಉಲ್ಲೇರ!ಬೊಕ್ಕ ತುಳು ಭಾಷೆಯ ವಿಷಯ ಯಾನ್ ಲಾ ನಿಮ್ಮೊಟ್ಟಿಗೆ ಬರ್ಪೇ!


ಇನ್ನು ಈ ಅಭಿಯಾನಕ್ಕೆ ಕರಾವಳಿ ಭಾಗದ ಜನಪ್ರತಿನಿಧಿಗಳೂ ಸಹ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದು, ಅಭಿಯಾನವನ್ನು ಬೆಂಬಲಿಸಿ ತುಳು ಭಾಷೆಯಲ್ಲೇ ಟ್ವೀಟ್‌ ಮಾಡಿ ಗಮನ ಸೆಳೆದಿದ್ದಾರೆ. ಖ್ಯಾತ ವ್ಯಂಗ್ಯಚಿತ್ರಕಾರ ಕುಂದಾಪುರ ಮೂಲದ ಸತೀಶ್ ಆಚಾರ್ಯ ಅವರೂ ಸಹ ತಮ್ಮ ಈ ಹಿಂದಿನ ಕಂಬಳ ಸಂಬಂಧಿ ವ್ಯಂಗ್ಯಚಿತ್ರವೊಂದನ್ನು ಪೋಸ್ಟ್ ಮಾಡುವ ಮೂಲಕ ಈ ಅಭಿಯಾನಕ್ಕೆತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
Our culture our pride! #TuluOfficialinKA_KL @CMofKarnataka pic.twitter.com/6nplcn365z

Advertisement

Tulu is as much part of me, as much close to me as Kannada. Tulu is a culture, not just a language. Richly deserves the recognition both at state and national level. #TuluOfficialinKA_KL #TuluTo8thSchedule pic.twitter.com/vTeG5Rxay6


ತುಳು ಭಾಷೆಯನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಅಗ್ರಹಿಸಿ #Tulu #TuluTo8thSchedule , #TuluOfficialinKA_KL ಎಂಬೆಲ್ಲಾ ಹ್ಯಾಶ್‌ ಟ್ಯಾಗ್‌ ಮೂಲಕ ಟ್ವೀಟರ್‌ ನಲ್ಲಿ ಆಗ್ರಹದ ಅಭಿಯಾನ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next