Advertisement

ವಾಯ್ಸ್ ಟ್ವೀಟ್‌ಗೆ ವಾಯ್ಸ್ ಕ್ಯಾಪ್ಷನ್

02:48 PM Jul 17, 2021 | Team Udayavani |

ನವದೆಹಲಿ: 2020ರಲ್ಲಿ ವಾಯ್ಸ್ ಟ್ವೀಟ್‌ಗೆ ಅವಕಾಶ ಮಾಡಿಕೊಟ್ಟಿದ್ದ ಟ್ವಿಟರ್‌ ಸಂಸ್ಥೆ, ವಾಯ್ಸ್ ಟ್ವೀಟ್‌ಗೆ ಅಡಿಬರಹ (ಕ್ಯಾಪ್ಷನ್‌) ಹಾಕುವ ಹೊಸ ಸೌಲಭ್ಯವನ್ನು ನೀಡಿದೆ. ವಾಟ್ಸ್‌ ಟ್ವೀಟ್‌ ವಿಂಡೋನ ಮೂಲೆಯಲ್ಲಿರುವ CC ಐಕಾನ್‌ ಟ್ಯಾಪ್‌ ಮಾಡುವ ಮೂಲಕ ವಾಯ್ಸ್ ಕ್ಯಾಪ್ಷನ್‌ ಪಡೆಯಬಹುದು.

Advertisement

ಸದ್ಯಕ್ಕೆ ಆ್ಯಪಲ್‌ ಪರಿಕರಗಳಲ್ಲಿ ಮಾತ್ರ ವಾಯ್ಸ್ ಟ್ವೀಟ್‌ಗೆ ಅವಕಾಶವಿರುವುದರಿಂದ, ಆಟೋಮ್ಯಾಟಿಕ್‌ ಕ್ಯಾಪ್ಷನ್‌ ಸೌಲಭ್ಯ ಕೂಡ ಅಲ್ಲಿ ಮಾತ್ರ ಲಭ್ಯವಿದೆ. ಸ್ವಯಂಚಾಲಿತ ಕ್ಯಾಪ್ಷನ್‌ ಸೌಲಭ್ಯವು ಇಂಗ್ಲೀಷ್‌ ಮಾತ್ರವಲ್ಲದೆ, ಹಿಂದಿ, ಫ್ರೆಂಚ್‌, ಜಪಾನೀಸ್‌, ಸ್ಪಾನಿಶ್‌, ಪೋರ್ಚುಗೀಸ್‌, ಇಂಡೋನೇಷಿಯನ್‌, ಕೊರಿಯನ್‌ ಹಾಗೂ ಇಟಾಲಿಯನ್‌ ಭಾಷೆಗಳಲ್ಲೂ ಲಭ್ಯ.

ಜಿಯೋ ಟಿವಿಯಲ್ಲಿ ಅಮರನಾಥಯಾತ್ರೆ
ಪ್ರಸಕ್ತ ಸಾಲಿನ ಅಮರ್‌ನಾಥ್‌ ಯಾತ್ರೆಯನ್ನು ಜಿಯೋ ಟಿವಿ ಮೂಲಕ ವೀಕ್ಷಿಸಲು ಸಾಧ್ಯವಿದೆ. ರಿಲಯನ್ಸ್‌ ಜಿಯೋ ಟಿವಿಯು “ಶ್ರೀ ಅಮರ್‌ನಾಥ್‌ ಜಿ ದೇಗುಲ ಸಮಿತಿ’ಯ ಸಹಕಾರದೊಂದಿಗೆ ಜಿಯೋ ವಿವಿಧ ಆ್ಯಪ್‌ಗ್ಳಿಂದ ಲೈವ್‌ ಸ್ಟ್ರೀಮಿಂಗ್‌ ನಡೆಸಲಿದೆ.

ಜಿಯೋ ಮೀಟ್‌ ಮೂಲಕ ಭಕ್ತರು ದರ್ಶನ, ಪೂಜೆ, ಹವನದಲ್ಲೂ ಭಾಗವಹಿಸಬಹುದಾಗಿದೆ. ಜಿಯೋ ಡಿಜಿಟಲ್‌ ಲೈವ್‌ ನಿಂದ ವರ್ಚುವಲ್‌ ಅನುಭವ ಪಡೆವ ಜತೆಗೆ ಅರ್ಚಕರೊಂದಿಗೆ ನಕ್ಷತ್ರ, ಗೋತ್ರ ತಿಳಿಸಿ ಪೂಜೆಯಲ್ಲೂ ಪಾಲ್ಗೊಳ್ಳಬಹುದಾಗಿದೆ. ಮಾಹಿತಿಗೆ www.shriamarnathjishrine.com ಸಂಪರ್ಕಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next