Advertisement

ಬಿಗ್‌ ಬಿ, ಅದ್ನಾನ್‌ ಟ್ವಿಟರ್‌ ಖಾತೆ ಹ್ಯಾಕ್‌

02:19 AM Jun 12, 2019 | sudhir |

ಮುಂಬಯಿ: ಬಾಲಿವುಡ್‌ ಸೂಪರ್‌ ಸ್ಟಾರ್‌ ಅಮಿತಾಭ್‌ ಬಚ್ಚನ್‌ ಹಾಗೂ ಹಾಡುಗಾರ ಅದ್ನಾನ್‌ ಸಾಮಿ ಅವರ ಟ್ವಿಟರ್‌ ಖಾತೆಗಳನ್ನು ಕಿಡಿಗೇಡಿಗಳು ಹ್ಯಾಕ್‌ ಮಾಡಿ, ಅವರ ಖಾತೆಗಳಲ್ಲಿನ ಭಾವಚಿತ್ರಗಳನ್ನು ಬದಲಿಸಿ, ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಫೋಟೋ ಹಾಕಿದ್ದ ಘಟನೆ ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಜತೆಗೆ, ತುರ್ಕಿಸ್ತಾನ ಪ್ರೇರೇಪಿತ ಸಾಲುಗಳು ಹಾಗೂ ತುರ್ಕಿಸ್ತಾನ್‌ನ ಬಾವುಟಗಳಿರುವ ಚಿತ್ರಗಳನ್ನು, ಪಾಕ್‌ ಧ್ವಜ ಎಮೋಜಿಯನ್ನೂ ಹಾಕಲಾಗಿತ್ತು. ಇದಾಗಿ, ಕೆಲ ಹೊತ್ತಿನಲ್ಲೇ ಬಚ್ಚನ್‌ ಖಾತೆಯನ್ನು ನವೀಕರಣಗೊಳಿಸ ಲಾಗಿತ್ತು ಎಂದು ಮೂಲಗಳು ಹೇಳಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next