Advertisement
ಈ ಕುರಿತು “ಉದಯವಾಣಿ’ ಜೊತೆ ಮಾತನಾಡಿರುವ ಸಂಘಟನೆಯ ನಾಯಕ ಭಾಸ್ಕರಪ್ರಸಾದ್, “ಐಜಿಪಿ ಅವರು ನನ್ನ ಜೊತೆ ಮಾತನಾಡಿರುವ ಸದರಿ ಸಂಭಾಷಣೆಯನ್ನು ನಾನು ಬಿಡುಗಡೆ ಮಾಡಿಲ್ಲ. ಇದು ಮಾಧ್ಯಮಗಳಿಗೆ ಹೇಗೆ ಸೋರಿಕೆ ಆಯಿತು ಎಂಬುದೇ ತಿಳಿಯುತ್ತಿಲ್ಲ. ನನ್ನನ್ನು ಬಂ ಧಿಸಿ ಜೈಲಿಗೆ ಸೇರಿಸುವ ಮುನ್ನ ನಾನು ನನ್ನ ಮೊಬೈಲ್ ಅನ್ನು ಸ್ನೇಹಿತ ಮಂಜು ಎಂಬುವರ ಬಳಿ ಕೊಟ್ಟು ಹೋಗಿದ್ದೆ. ಅವರಿಂದ ನನ್ನ ಮೊಬೈಲ್ ಕಿತ್ತುಕೊಂಡಿದ್ದ ಪೊಲೀಸರು ಈ ಸಂಭಾಷಣೆಯನ್ನು ಕಾಪಿ ಮಾಡಿಕೊಂಡಿರುವ ಸಾಧ್ಯತೆ ಇದೆ’ ಎಂದು ಅನುಮಾನ ವ್ಯಕ್ತಪಡಿಸಿದರು.
ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ. ಜತೆಗೆ ಆಡಿಯೋ ಕ್ಲಿಪ್ ಒದಗಿಸುವಂತೆ
ಕೇಳಲಾಗಿದೆ. ಪ್ರಕರಣದಲ್ಲಿ ಅಧಿಕಾರಿಯಿಂದ ಲೋಪವಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.