ಇಡೀ ಜವಾಬ್ದಾರಿಯನ್ನು ತಮ್ಮ ಮೇಲೇ ಹಾಕಿಕೊಂಡರು ಜಗನ್. ಅವರು ಕೆಲವು ವರ್ಷಗಳ ಹಿಂದೆ “ಆಡೂ ಆಟ ಆಡೂ’ ಎಂಬ ಚಿತ್ರವನ್ನು ಶುರು ಮಾಡಿದ್ದರು. ಚಿತ್ರ ಕಾರಣಾಂತರಗಳಿಂದ ತಡವಾಗಿತ್ತು. ಇದೀಗ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆಯಾಗುತ್ತಿರುವ ಕುರಿತು ಜಗನ್ ತಮ್ಮ ತಂಡದೊಂದಿಗೆ ಮಾಧ್ಯಮದವರೆದುರು ಬಂದು ಕುಳಿತಿದ್ದರು.
Advertisement
“ಚಿತ್ರ ತಡವಾಗೋದಕ್ಕೆ ಕಾರಣ ನಾನೇ. ನನ್ನ ಕಡೆಯಿಂದ ಚಿತ್ರ ತಡವಾಯೆ¤à ಹೊರತು, ಬೇರೆ ಯಾರಿಂದಲೂ ಸಮಸ್ಯೆ ಆಗಿಲ್ಲ. ಚಿತ್ರ ತಡವಾಗೋದಕ್ಕೆ ಕಾರಣ ಬಜೆಟ್ ಜಾಸ್ತಿಯಾಗಿದ್ದು. ನಾವಂದುಕೊಂಡಿದ್ದಕ್ಕಿಂತ ಬಜೆಟ್ ಸ್ವಲ್ಪ ಜಾಸ್ತಿ ಆಯ್ತು. ದುಡ್ಡು ಹೊಂದಿಸುವುದಕ್ಕೆ ಸ್ವಲ್ಪ ಸಮಯವಾದ್ದರಿಂದ ಚಿತ್ರ ತಡವಾಯಿತು. ಈಗ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ಇಷ್ಟು ದಿನ ಬಿಡುಗಡೆಗೆ ಹೊಡೆದಾಡಿದ್ದು, ಈಗ ಜನರಿಗೆ ತಲುಪಿಸುವ ಹೋರಾಟ ಮಾಡಬೇಕಿದೆ’ ಎಂದರು.
Related Articles
Advertisement
ಚಿತ್ರಕ್ಕೆ ವಿ. ಮನೋಹರ್ ಸಾಹಿತ್ಯ ರಚಿಸುವುದರ ಜೊತೆಗೆ ಸಂಗೀತವನ್ನು ಸಂಯೋಜಿಸಿದ್ದಾರೆ. “ಬಹಳ ಅನಿರೀಕ್ಷಿತ ತಿರುವುಗಳಿರುವ ಚಿತ್ರ ಇದು. ಇಲ್ಲಿ ಹೀರೋನೇ ವಿಲನ್ ಆಗುತ್ತಾನೆ. ನಂತರ ಇನ್ನೇನೋ ಆಗುತ್ತದೆ. ಒಟ್ಟಾರೆ ಬಹಳ ಜಾಣ್ಮೆಯಿಂದ ಚಿತ್ರಕಥೆಯನ್ನು ಹೆಣೆಯಲಾಗಿದೆ. ಜಗನ್ ಜೊತೆಗೆ ಶ್ರುತಿ, ತಿಲಕ್, ಸುಮನ್ ರಂಗನಾಥ್, ಬಿಜು ಮೆನನ್ ಮುಂತಾದವರು ನಟಿಸಿದ್ದಾರೆ’ ಎಂದು ಮಾಹಿತಿ ಕೊಟ್ಟರು.
ಅಂದು ಉಮೇಶ್ ಬಣಕಾರ್ ಸಹ ಹಾಜರಿದ್ದರು. ಅವರು ಚಿತ್ರದಲ್ಲಿ ನಟಿಸದಿದ್ದರೂ, ಜಗನ್ ದಾವಣಗೆರೆಯವರಾದ್ದರಿಂದ ಅವರಿಗೆ ಸಹಕಾರ ಕೊಡುವುದಕ್ಕೆ ಬಂದಿದ್ದರು. ಈ ಚಿತ್ರ ಗೆಲ್ಲಲಿ ಎಂದು ಹಾರೈಸಿ ಮಾತು ಮುಗಿಸಿದರು.