Advertisement

ಉತ್ತರ ಬಾಗ್ಧಾದ್‌ನಲ್ಲಿ ಅವಳಿ ಆತ್ಮಾಹುತಿ ದಾಳಿಗೆ 20 ಮಂದಿ ಬಲಿ

03:26 PM Mar 09, 2017 | udayavani editorial |

ಬಾಗ್ಧಾದ್‌ : ಉತ್ತರ ಬಾಗ್ಧಾದ್‌ನಲ್ಲಿ  ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಗ್ರಾಮವೊಂದನ್ನು ಗುರಿಯಾಗಿರಿಸಿಕೊಂಡು ನಡೆಸಲಾದ ಅವಳಿ ಆತ್ಮಾಹುತಿ ಬಾಂಬ್‌ ಸ್ಫೋಟದಲ್ಲಿ ಕನಿಷ್ಠ 20 ಮಂದಿ ಹತಾರಾಗಿರುವುದಾಗಿ ಇರಾಕ್‌ನ ರಕ್ಷಣಾ ಸಚಿವಾಲಯ ಹೇಳಿದೆ.

Advertisement

ತಿಕ್ರಿತ್‌ ನಗರಕ್ಕೆ ಸಮೀಪದ ಅಲ್‌ ಹಜಾಜ್‌ ಎಂಬ ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳಕ್ಕೆ ಇಬ್ಬರು ಆತ್ಮಾಹುತಿ ಬಾಂಬ್‌ ದಾಳಿಕೋರರು ಹೋಗಿ ಅಲ್ಲಿ ತಮ್ಮನ್ನು ಸ್ಫೋಟಿಸಿಕೊಂಡರು. ಕನಿಷ್ಠ 20 ಮಂದಿ ಸಾವಿಗೀಡಾದರೆ ಸುಮಾರು 13 ಮಂದಿ ಗಾಯಗೊಂಡರು ಎಂದು ಸಚಿವಾಲಯ ಹೇಳಿದೆ. 

ತಿಕ್ರಿತ್‌ ನಗರವು ಬಾಗ್ಧಾದಿನಿಂದ 130 ಕಿ.ಮೀ. ಅಥವಾ 80 ಮೈಲು ದೂರದಲ್ಲಿದೆ. 

ಈ ಭೀಕರ ಆತ್ಮಾಹುತಿ ದಾಳಿಯನ್ನು ನಡೆಸಿದವರು ಯಾರೆಂಬುದು ತತ್‌ಕ್ಷಣಕ್ಕೆ ಗೊತ್ತಾಗಿಲ್ಲ; ಆದರೂ ಇದು ಐಸಿಸ್‌ ಉಗ್ರರದ್ದೇ ಕೃತ್ಯ ಎಂದು ಶಂಕಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next