Advertisement

ಮತ್ತೆ ಟ್ವೀಟರ್‌ ಅಭಿಯಾನ

12:44 AM Feb 18, 2020 | mahesh |

ಮಂಗಳೂರು: ಈಗ ಪ್ರಾರಂಭಗೊಂಡಿರುವ ವಿಧಾನಮಂಡಲ ಅಧಿವೇಶನದಲ್ಲಿ ಗಮನಸೆಳೆಯುವ ಮೂಲಕ ತುಳು ಭಾಷೆಯನ್ನು ಅಧಿಕೃತ ರಾಜ್ಯಭಾಷೆಯಾಗಿ ಮಾಡುವ ಭರವಸೆ ಕಾರ್ಯರೂಪಕ್ಕೆ ಬರಬೇಕೆಂದು ಆಗ್ರಹಿಸಿ ಜೈ ತುಳುನಾಡ್‌ ಸಂಘಟನೆ ಆಶ್ರಯದಲ್ಲಿ ಟ್ವೀಟ್‌ ತುಳುನಾಡ್‌ ಅಭಿಯಾನ ಸೋಮವಾರ ಸಂಜೆ 6ರಿಂದ ರಾತ್ರಿ 10ರ ವರೆಗೆ ನಡೆಯಿತು.

Advertisement

#TuluOfficialinKA_KL ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ಅಭಿಯಾನ ನಡೆಸಲಾಯಿತು. ತುಳು ಅಧಿಕೃತ ರಾಜ್ಯಭಾಷೆ ಮಾಡಬೇಕೆಂಬ ತುಳುನಾಡಿನ ಕೂಗನ್ನು ಈಗಾಗಲೇ ಇಲ್ಲಿನ ಶಾಸಕರು ಸರಕಾರಕ್ಕೆ ತಲುಪಿಸಿದ್ದಾರೆ.

ಫೆ. 18ರಿಂದ ವಿಧಾನ ಮಂಡಲದ ಅಧಿವೇಶನ ಆರಂಭವಾಗು ವುದರಿಂದ ಮತ್ತೂಮ್ಮೆ ನೆನಪಿಸುವ ಉದ್ದೇಶದಿಂದ ಹ್ಯಾಶ್‌ಟ್ಯಾಗ್‌ ಅಭಿಯಾನ ನಡೆಸಲಾಗುತ್ತಿದೆ ಎಂದು ಸಂಘದ ಪ್ರಮುಖರು ತಿಳಿಸಿದ್ದಾರೆ.

ಜೈ ತುಳುನಾಡ್‌ ಸಂಘಟನೆಯು ಈಗಾಗಲೇ ಹಲವು ಬಾರಿ ಟ್ವೀಟರ್‌ ಅಭಿಯಾನ ನಡೆಸಿ ಜನಪ್ರತಿನಿಧಿಗಳ ಸೆಳೆಯುವಂತೆ ಮಾಡುವಲ್ಲಿ ಪ್ರಯತ್ನಿಸಿದೆ.

ಸಚಿವರ ಟ್ವೀಟ್‌
ತುಳು ಭಾಷೆಯನ್ನು ಅಧಿಕೃತ ರಾಜ್ಯ ಭಾಷೆಯಾಗಿ ಘೋಷಿಸಬೇಕೆಂಬ ತುಳುವರ ಬೇಡಿಕೆಗೆ ಸ್ಪಂದಿಸುವುದು ನಮ್ಮ ಕರ್ತವ್ಯವಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಲ್ಲಿ ಮನವಿ ಮಾಡಲಾಗುವುದು. ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಅಗತ್ಯ ತೀರ್ಮಾನ ಕೈಗೊಳ್ಳಲು ಇದು ಸಕಾಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಟ್ವೀಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next