Advertisement
ಭಾರತೀಯರ ಟ್ವಿಟರ್ ಖಾತೆಗಳ ಬತ್ತಳಿಕೆಯಿಂದ ಚಿಮ್ಮಿಬಂದ ಇಂಡಿಯಾ ಟುಗೆದರ್, ಇಂಡಿಯಾ ಅಗೇನೆಸ್ಟ್ ಪ್ರೊಪಗಂಡಾ ಹ್ಯಾಶ್‌ಟ್ಯಾಗ್‌ಗಳು ಅಕ್ಷರಶಃ ವಿದೇಶಿ ಟೀಕಾಕಾರರಿಗೆ ಬುಧವಾರ ಬೆವರಿಳಿಸಿದೆ.
Related Articles
Advertisement
ಸ್ಟಾರ್ಗಳ ತಿರುಗೇಟು
ಸಚಿನ್ ತೆಂಡೂಲ್ಕರ್, ಮಾಜಿ ಕ್ರಿಕೆಟಿಗ “ಭಾರತದ ಸಾರ್ವಭೌಮತ್ವ ಯಾವುದರೊಂದಿಗೂ ರಾಜಿಮಾಡಿಕೊಳ್ಳದು. ಬಾಹ್ಯಶಕ್ತಿಗಳು ಪ್ರೇಕ್ಷಕರಾಗಬಹುದಷ್ಟೇ, ಭಾಗೀದಾರರಾಗಬಾರದು. ಭಾರತಕ್ಕಾಗಿ ಏನು ನಿರ್ಧರಿಸಬೇಕೆನ್ನುವುದು ಭಾರತೀಯರಿಗೆ ಗೊತ್ತು. ರಾಷ್ಟ್ರವಾಗಿ ನಾವು ಒಗ್ಗಟ್ಟಾಗಿರೋಣ’.
ಅಕ್ಷಯ್ ಕುಮಾರ್, ಬಾಲಿವುಡ್ ನಟ “ರೈತರು ನಮ್ಮ ದೇಶದ ಅವಿಭಾಜ್ಯ ಅಂಗ. ಅವರ ಸಮಸ್ಯೆ ನಿವಾರಣೆಗೆ ಪ್ರಯತ್ನಗಳು ಸಾಗಿವೆ. ಭಿನ್ನಮತ ಸೃಷ್ಟಿಸುವವರತ್ತ ನೋಡುವ ಬದಲು, ಸೌಹಾರ್ದಯುತ ಕಾಯ್ದೆಗಳನ್ನು ಬೆಂಬಲಿಸೋಣ’.
ರವಿಶಾಸ್ತ್ರಿ, ಮಾಜಿ ಕ್ರಿಕೆಟಿಗ: “ಭಾರತದ ಪರಿಸರ ವ್ಯವಸ್ಥೆಗೆ ರೈತರೇ ಬೆನ್ನೆಲುಬು. ಪ್ರತಿಭಟನೆ ವಿರುದ್ಧ ಕ್ರಮಗಳು ನಮ್ಮ ಆಂತರಿಕ ವಿಷಯ. ಮಾತುಕತೆಗಳ ಮೂಲಕ ನಾವು ಇದನ್ನು ಬಗೆಹರಿಸಿಕೊಳ್ಳುತ್ತೇವೆ. ಜೈ ಹಿಂದ್!’.
ಅಮಿತ್ ಶಾ, ಗೃಹ ಸಚಿವ: ಯಾವ ಅಪಪ್ರಚಾರದಿಂದಲೂ ಭಾರತದ ಒಗ್ಗಟ್ಟನ್ನು ಹಿಮ್ಮೆಟ್ಟಿಸಲಾಗದು. ಯಾವ ಅಪಪ್ರಚಾರದಿಂದಲೂ ಭಾರತ ಏರುವ ಹೊಸ ಎತ್ತರವನ್ನು ತಡೆಯಲಾಗದು. ಭಾರತದ ಹಣೆಬರಹವನ್ನು ಅಭಿವೃದ್ಧಿ ನಿರ್ಧರಿಸುತ್ತದೆಯೇ ಹೊರತು, ಅಪಪ್ರಚಾರಗಳಲ್ಲ.
(ಬೆಂಬಲಿಸಿದ ಪ್ರಮುಖರು: ಪ್ರಗ್ಯಾನ್ ಓಝಾ (ಕ್ರಿಕೆಟಿಗ), ನಟರಾದ ಸುನಿಲ್ ಶೆಟ್ಟಿ, ಏಕ್ತಾ ಕಪೂರ್, ಅಜಯ್ ದೇವಗನ್, ಬಿಜೆಪಿಯ ಜೆ.ಪಿ. ನಡ್ಡಾ, ಸ್ಮತಿ ಇರಾನಿ, ಗೌತಮ್ ಗಂಭೀರ್, ನಿರ್ಮಲಾ ಸೀತಾರಾಮನ್, ಪಿಯೂಶ್ ಗೋಯಲ್.)
ಎಚ್ಚರಿಕೆಗೆ ಬಗ್ಗಿದ ಟ್ವಿಟರ್
ರೈತ ಜನಾಂಗ ಹತ್ಯೆಗೆ ಮೋದಿ ಸಂಚು ರೂಪಿಸುತ್ತಿದ್ದಾರೆ- ಎಂಬ ಅರ್ಥದ ಹ್ಯಾಶ್‌ಟ್ಯಾಗ್ ವಿರುದ್ಧ ಟ್ವಿಟರ್ ಕ್ರಮ ಕೈಗೊಂಡಿದ್ದು, 250 ಖಾತೆಗಳನ್ನು ಬ್ಲಾಕ್ ಮಾಡಿದೆ. ರೈತ ಪ್ರತಿಭಟನೆಯನ್ನು ಬೆಂಬಲಿಸಿ, ಸರಕಾರದ ವಿರುದ್ಧ ನಕಲಿ ಸುದ್ದಿಗಳನ್ನು ಹಬ್ಬಿಸುತ್ತಿರುವ ಖಾತೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರಕಾರ ಸೂಚಿಸಿದ ಕೆಲವೇ ತಾಸುಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಸುಪ್ರೀಂ ತಿರಸ್ಕಾರ
ಹೊಸದಿಲ್ಲಿಯಲ್ಲಿ ಜ.26ರಂದು ನಡೆದ ಅಹಿತಕರ ಘಟನೆಗಳಿಗೆ ಕಾಲಮಿತಿಯ ತನಿಖೆ ನಡೆಸಬೇಕು ಎಂಬ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ಈ ಬಗ್ಗೆ ಯಾವುದೇ ರೀತಿಯ ಆದೇಶ ನೀಡಲೂ ಮು.ನ್ಯಾ| ಎಸ್.ಎ.ಬೋಬೆx ನೇತೃತ್ವದ ನ್ಯಾಯಪೀಠ ನಿರಾಕರಿಸಿದೆ.