Advertisement
ಸಂಭ್ರಮ ಮುಂದೆಯೂ ಇರುತ್ತದೆ“ವಿಶೇಷ ಸ್ನೇಹಿತನಿಗೆ ವಿಶೇಷವಾದ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಹುಟ್ಟುಹಬ್ಬ ಖುಷಿ ಮತ್ತು ನಗುವಿನಿಂದ ತುಂಬಿರಲಿ. ನಿಮ್ಮ ಈ ದಿನ ಮತ್ತು ವರ್ಷ ಅಮೋಘವಾಗಿರಲಿ ಬ್ರದರ್’ ಎಂದು ವಿವಿಎಸ್ ಲಕ್ಷ್ಮಣ್ ಹಾರೈಸಿದ್ದಾರೆ. ಇದಕ್ಕೆ ಸೆಹವಾಗ್, “ನಿಮ್ಮ ಮಾತೇ ಶ್ರೇಷ್ಠ ಸಹೋದರ. ಸಂಭ್ರಮ ಇಂದೂ ಇದೆ, ಮುಂದೆಯೂ ಇರುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ.
ಮಧ್ಯರಾತ್ರಿ 12 ಗಂಟೆಗೆ ಸರಿಯಾಗಿ ಬಿಸಿಸಿಐ ಸೆಹವಾಗ್‌ಗೆ ಹುಟ್ಟುಹಬ್ಬದ ಶುಭ ಹಾರೈಸಿ ಟ್ವೀಟ್ ಮಾಡಿತು. ಬಿಸಿಸಿಐ ಸಮಯ ಪಾಲನೆಯನ್ನು ಮೆಚ್ಚಿಕೊಂಡ ಸೆಹವಾಗ್ “ಎಲ್ಲವೂ ಟೈಮಿಂಗ್‌ನ ಮೇಲೆ ನಿಂತಿದೆ. ಮಧ್ಯರಾತ್ರಿ ವೀಡಿಯೊ ಅಪ್‌ಲೋಡ್ ಮಾಡಿದ್ದೀರಿ. ಧನ್ಯವಾದಗಳು’ ಎಂದು ಟ್ವೀಟ್ ಮಾಡಿದ್ದಾರೆ.