ಬೆಂಗಳೂರು: ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ವಿಭಾಗದ ಪ್ರಮುಖ ಜಾಗತಿಕ ವಾಹನ ತಯಾರಕರಾದ ಟಿವಿಎಸ್ ಮೋಟಾರ್ ಕಂಪನಿ (ಟಿವಿಎಸ್‌ಎಂ) ಯಿಂದ ಅತ್ಯಾ ಕರ್ಷಕ ವಿನ್ಯಾಸ, ಉತ್ತಮ ಕಾರ್ಯ ನಿರ್ವಹಣೆ ಹಾಗೂ ಸೌಕರ್ಯಗಳುಳ್ಳ ಹೊಚ್ಚ ಹೊಸ “ಟಿವಿಎಸ್ ಜುಪಿಟರ್ 110′ ಅನ್ನು ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಬಿಡುಗಡೆಗೊಳಿಸಲಾಯಿತು.
Advertisement
ಈ ನೂತನ ಸ್ಕೂಟರ್ ನೆಕ್ಸ್ಟ್ ಜೆನ್ ಇಂಜಿನ್ ಹೊಂದಿದ್ದು, ಹೆಚ್ಚು ಮೈಲೇಜ್, ಆಕರ್ಷಣೀಯ ವಿನ್ಯಾಸ, ಅತ್ಯುತ್ತಮಕಾರ್ಯನಿರ್ವಹಣೆ, ಸೌಕರ್ಯ, ಸುರಕ್ಷತೆ ಮತ್ತು ತಂತ್ರಜ್ಞಾನವನ್ನು ಒದಗಿಸುವ ಸ್ಕೂಟರ್ ಇದಾಗಿದೆ.
Related Articles
ಘೋಷವಾಕ್ಯದೊಂದಿಗೆ ಇದೀಗ ನೂತನ ಜುಪಿಟರ್ ಬಿಡುಗಡೆಯಾಗಿದೆ. ಇದು ಹೆಚ್ಚು ಇಂಧನ ದಕ್ಷತೆ ನೀಡುವ ಸಾಮರ್ಥಯ,
ಸ್ಥಳಾವಕಾಶದ ಡಿಕ್ಕಿ, ಸಮಕಾಲೀನ ವಿನ್ಯಾಸ ಸೇರಿ ಮತ್ತಿತರ ಉತ್ತಮ ಗುಣಲಕ್ಷಣಗಳನ್ನು ಹೊಂದಿದೆ ಎಂದು ತಿಳಿಸಿದರು.
Advertisement
ವಿಶೇಷತೆಗಳು*ಆಕರ್ಷಕ ಇನ್ಫಿನಿಟಿ ಲ್ಯಾಂಪ್, ಉದ್ದವಾದ ಸೀಟು, ಬಾಡಿ ಬ್ಯಾಲೆನ್ಸ್ ತಂತ್ರಜ್ಞಾನ, ಡಿಕ್ಕಿಯಲ್ಲಿ 2 ಫುಲ್ ಹೆಲ್ಮೆಟ್ ಇಡುವಷ್ಟು ಸ್ಥಳಾವಕಾಶ, ಮೆಟಲ್ ಮ್ಯಾಕ್ಸ್ ಬಾಡಿ, ಹೆಡ್‌ಲ್ಯಾಂಪ್‌ಗಳು, ಟರ್ನ್ ಸಿಗ್ನಲ್ ಲ್ಯಾಂಪ್ ರೆಸ್ಟ್ , ಎಮರ್ಜೆನ್ಸಿ ಬ್ರೇಕ್ ವಾರ್ನಿಂಗ್ ಫೀಚರ್‌ಗಳಿವೆ. *ಉಳಿದ ಜುಪಿಟರ್‌ಗಳಿಗಿಂತ ಈ ನೂತನ ಸ್ಕೂಟರ್ ಶೇ.10ರಷ್ಟು ಹೆಚ್ಚು ಮೈಲೇಜ್, ಉತ್ತಮ ಪಿಕ್-ಅಪ್. *ವಾಯ್ಸ್ ಅಸಿಸ್ಟ್ ಮೂಲಕ ನ್ಯಾವಿಗೇಶನ್, ಕಾಲ್ ಮತ್ತು ಎಸ್‌ಎಂಎಸ್ ಮಾಡಬಹುದಾದ ಆಕರ್ಷಕ ಫೀಚರ್‌ಗಳನ್ನು ಒದಗಿಸುವ ಬ್ಲೂಟೂತ್ ನಿಂದ ಕಾರ್ಯ ನಿರ್ವಹಿಸುವ ಸಂಪೂರ್ಣ ಡಿಜಿಟಲ್ ಕ್ಲಸ್ಟರ್ ಹೊಂದಿದೆ.