ಕೋಲ್ಕತಾ: ನಿಮ್ಮ ಮನೆಯ ಫ್ರಿಜ್, ಟಿವಿ, ವಾಷಿಂಗ್ ಮೆಷಿನ್, ಏರ್ ಕಂಡೀಷನರ್ ಮತ್ತಿತರ ಗೃಹೋಪಯೋಗಿ ವಸ್ತುಗಳು ಹಳತಾ ಗಿವೆಯೇ ಅಥವಾ ಹೊಸತು ಖರೀದಿ ಮಾಡುವ ಇರಾದೆ ಇದೆಯೇ? ಹಾಗಿದ್ದರೆ ಶೀಘ್ರವೇ ಅವುಗಳನ್ನು ಖರೀದಿ ಸುವುದು ಒಳಿತು. ಶೀಘ್ರದಲ್ಲಿಯೇ ಅವುಗಳ ಬೆಲೆಗಳಲ್ಲಿ ಶೇ. 20ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಜಗತ್ತಿನಲ್ಲಿ ಟಿವಿ ಪ್ಯಾನೆಲ್‌ಗಳ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಟಿವಿಗಳ ಬೆಲೆ ಶೇ. 30ರಿಂದ 100ರ ವರೆಗೆ ಹೆಚ್ಚುವ ಸಾಧ್ಯತೆಗಳಿವೆ.
ಅಂತರ್ಗತ ವಸ್ತುಗಳ ವೆಚ್ಚ (ಇನ್‌ಪುಟ್ ಮೆಟೀರಿಯಲ್ ಕಾಸ್ಟ್ )ದಲ್ಲಿ ಏರಿಕೆ ಆಗಿರುವುದರಿಂದ ಒಂದೇ ಬಾರಿಗೆ ಬೆಲೆಯಲ್ಲಿ ಏರಿಕೆಯಾಗುತ್ತದೆ ಎಂದು ಕೈಗಾರಿಕಾ ಕ್ಷೇತ್ರದ ವಿಶ್ಲೇಷಕರು ಹೇಳಿದ್ದಾರೆ.
ತಾಮ್ರ, ಸತು, ಅಲ್ಯುಮಿನಿಯಂ, ಉಕ್ಕು, ಪ್ಲಾಸ್ಟಿಕ್ ಮತ್ತಿತರ ವಸ್ತುಗಳೂ ದುಬಾರಿಯಾಗಿವೆ. ಹಡಗಿನ ಮೂಲಕ ಸರಕು ಸಾಗಣೆ ವೆಚ್ಚ ಕೂಡ ಶೇ. 40-50ರಷ್ಟು ಹೆಚ್ಚಾಗಿದೆ ಎಂದು ಮೂಲಗಳನ್ನು ಉಲ್ಲೇಖೀಸಿ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಕಂಪೆನಿಗಳಿಗೂ ಕೂಡ ಈ ಏರಿಕೆ ಹೊರೆ ಯಾಗಲಿದ್ದು, ಮುಂದಿನ ತ್ತೈಮಾಸಿಕದಲ್ಲಿ ಹಣ ದುಬ್ಬರ ದರ ಏರಿಕೆಗೆ ಕಾರಣವಾಗಲಿದೆ ಎಂದು ಮೂಲಗಳು ಹೇಳಿವೆ.
ಸೆಪ್ಟಂಬರ್‌ನಲ್ಲಿಯೇ ಬೆಲೆ ಏರಿಕೆಗೆ ನಿರ್ಧರಿಸಲಾಗಿತ್ತಾದರೂ ಹಬ್ಬಗಳ ಹಿನ್ನೆಲೆಯಲ್ಲಿ ಅದನ್ನು ಮುಂದೂಡಲಾಗಿತ್ತು ಎಂದು ಕಂಪೆನಿಗಳ ಮೂಲಗಳು ತಿಳಿಸಿವೆ.
ಬೆಲೆಯೇರಿಕೆ ಪ್ರಮಾಣ ವಸ್ತು
15 20% ತಾಮ್ರ, ಸತು ಮತ್ತು ಅಲ್ಯುಮಿನಿಯಂ
30 40% ಪ್ಲಾಸ್ಟಿಕ್ ಉಪ ಉತ್ಪನ್ನಗಳು
40 50% ಹಡಗುಗಳ ಮೂಲಕ ಸರಕು ಸಾಗಣೆ ವೆಚ್ಚ
ಹೆಚ್ಚಳ ಎಷ್ಟಾಗಬಹುದು?
ಪ್ರಮಾಣ ವಸ್ತುಗಳು
8 10% ವಾಷಿಂಗ್ ಮೆಷಿನ್, ಏರ್ ಕಂಡೀಷನರ್‌ಗಳು
12 15% ಫ್ರಿಜ್
7 20% ಟಿವಿ