Advertisement

ಅಪಾರ್ಟ್ ಮೆಂಟ್ ನ 4ನೇ ಮಹಡಿಯಿಂದ ಕೆಳಗೆ ಬಿದ್ದು ಟಿವಿ ಆ್ಯಂಕರ್ ಸಾವು

12:42 PM Dec 15, 2018 | Team Udayavani |

ನೋಯ್ಡಾ:ಖಾಸಗಿ ಟಿವಿ ಚಾನೆಲ್ ನ ಸುದ್ದಿ ವಾಚಕಿಯೊಬ್ಬರು ಅಪಾರ್ಟ್ ಮೆಂಟ್ ನ ನಾಲ್ಕನೇ ಮಹಡಿಯ ಬಾಲ್ಕನಿ ಮೇಲಿನಿಂದ ಕೆಳಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ನಸುಕಿನ ವೇಳೆ ನೋಯ್ಡಾದಲ್ಲಿ ನಡೆದಿದೆ.

Advertisement

ರಾಜಸ್ಥಾನ ಮೂಲದ ರಾಧಿಕಾ ಕೌಶಿಕ್ ನೋಯ್ಡಾದ ಸೆಕ್ಟರ್ 77ರಲ್ಲಿರುವ ಆಂಟ್ರಿಖ್ ಫಾರೆಸ್ಟ್ ಅಪಾರ್ಟ್ ಮೆಂಟ್ ನಲ್ಲಿ ಸಹೋದ್ಯೋಗಿ ಜೊತೆ ವಾಸವಾಗಿದ್ದಳು. ಈ ಘಟನೆ ಬೆಳಗ್ಗಿನ ಜಾವ 3.30ರ ಹೊತ್ತಿಗೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಧಿಕಾ ಕೌಶಿಕ್ ಮನೆಯವರು ನೀಡಿದ ದೂರಿನ ಅನ್ವಯ ಭಾರತೀಯ ದಂಡ ಸಂಹಿತೆ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.ವಿಚಾರಣೆಗಾಗಿ ಸಹೋದ್ಯೋಗಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಸೆಕ್ಟರ್ 49 ಪೊಲೀಸ್ ಠಾಣಾಧಿಕಾರಿ ಗಿರಿಜಾ ಶಂಕರ್ ತ್ರಿಪಾಠಿ ವಿವರಿಸಿದ್ದಾರೆ.

ರಾಧಿಕಾ ಕೌಶಿಕ್ ಮತ್ತು ಆಕೆಯ ಸಹೋದ್ಯೋಗಿ ಇಬ್ಬರು ಖಾಸಗಿ ಟಿವಿ ಚಾನೆಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಘಟನೆ ನಡೆದ ವೇಳೆ ರಾಧಿಕಾ ಮದ್ಯಪಾನ ಮಾಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ರಾತ್ರಿ ಮನೆಯಲ್ಲಿ ಪಾರ್ಟಿ ಮಾಡಿದ್ದು, ಮದ್ಯದ ಬಾಟಲಿಗಳು ದೊರಕಿರುವುದಾಗಿ ವರದಿ ಹೇಳಿದೆ.

Advertisement

ಕುಡಿದ ಮತ್ತಿನಲ್ಲಿ ಬಾಲ್ಕನಿಯಿಂದ ಕಾಲುಜಾರಿ ಬಿದ್ದು ಸಾವನ್ನಪ್ಪಿರುವುದಾಗಿ ಸಹೋದ್ಯೋಗಿ ತಿಳಿಸಿದ್ದಾರೆ. ಸಾವಿನ ಹಿಂದೆ ಯಾವ ಕಾರಣ ಇದೆ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next