Advertisement

Big Boss OTT 3 ಗೆದ್ದ ವಿಶ್ ಖ್ಯಾತಿಯ ನಟಿ ಸನಾ ಮಕ್ಬೂಲ್ ಖಾನ್

05:45 PM Aug 03, 2024 | Team Udayavani |

ಮುಂಬಯಿ: ವಿಶ್ ಖ್ಯಾತಿಯ ಜನಪ್ರಿಯ ಟಿವಿ ನಟಿ ಸನಾ ಮಕ್ಬೂಲ್ ಖಾನ್ ಅವರು ಹಿಂದಿ ಬಿಗ್ ಬಾಸ್ ಓಟಿಟಿ-3 ಗೆದ್ದುಕೊಂಡಿದ್ದಾರೆ.

Advertisement

ಶೋ ನಿರೂಪಕ ಮತ್ತು ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಶುಕ್ರವಾರ ರಾತ್ರಿ(ಆಗಸ್ಟ್ 2) ಸನಾಗೆ ಟ್ರೋಫಿ, 25 ಲಕ್ಷ ರೂ. ಬಹುಮಾನವನ್ನು ವಿತರಿಸಿದರು.

ಜೂನ್ 21 ರಂದು ಪ್ರಾರಂಭವಾದ ಶೋ ನಲ್ಲಿ ರಾಪರ್ ನೇಜಿ ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದರು, ನಟ ರಣವೀರ್ ಶೋರೆ ಮೂರನೇ ಸ್ಥಾನದಲ್ಲಿ ಕೊನೆಗೊಂಡರು. ನೇಜಿ ಅವರು ಸನಾ ಅವರ ಅತ್ಯಾಪ್ತರಲ್ಲಿ ಒಬ್ಬರಾಗಿದ್ದರು.

ಮೆಹಂದಿ ಹೇ ರಚನೆ ವಾಲಿ ಧಾರಾವಾಹಿ ಖ್ಯಾತಿಯ ಟಿವಿ ನಟ ಸಾಯಿ ಕೇತನ್ ರಾವ್ ಪ್ರೇಕ್ಷಕರ ಮತಗಳಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿದರೆ, ಮತ್ತೊಬ್ಬ ಸ್ಪರ್ಧಿ ಅರ್ಮಾನ್ ಮಲಿಕ್‌ ಅವರ ಎರಡನೇ ಹೆಂಡತಿಯಾಗಿ ಸುದ್ದಿಯಾಗಿರುವ ಯುಟ್ಯೂಬರ್ ಕೃತಿಕಾ ಐದನೇ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

Advertisement

ಗ್ರ್ಯಾಂಡ್ ಫಿನಾಲೆಯಲ್ಲಿ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಸಹ-ನಟ ರಾಜ್‌ಕುಮಾರ್ ರಾವ್ ಜತೆಗೆ ಅವರ ಮುಂಬರುವ ಚಿತ್ರ ”ಸ್ತ್ರೀ 2” ಪ್ರಚಾರ ನಿಮಿತ್ತವಾಗಿ ಭಾಗಿಯಾಗಿದ್ದರು.

31 ರ ಹರೆಯದ ಸನಾ ಮಕ್ಬುಲ್ ಖಾನ್ ನಟಿಯಾಗಿ ಸನಾ ಮಕ್ಬುಲ್ ಎಂದು ಸುದ್ದಿಯಾದವರು. ರೂಪದರ್ಶಿಯಾಗಿದ್ದ ಸನಾ 2014 ರಲ್ಲಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟಿಯಾಗಿ ತೆಲುಗು ಮತ್ತು ತಮಿಳು ಚಲನಚಿತ್ರಗಳೊಂದಿಗೆ ಹಿಂದಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದವರು. ಕಲರ್ಸ್ ಟಿವಿ ಯ ‘ವಿಶ್‌’ನಲ್ಲಿ ಡಾ. ಅಲಿಯಾ ಕೊಠಾರಿ (ನೀ ಸನ್ಯಾಲ್) ಪಾತ್ರದ ಮೂಲಕ ಜನಪ್ರಿಯವಾದವರು.

Advertisement

Udayavani is now on Telegram. Click here to join our channel and stay updated with the latest news.

Next