Advertisement

ಡ್ರಗ್ಸ್ ಜಾಲ: ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಕಿರುತೆರೆ ನಟಿ !

05:25 PM Oct 25, 2020 | Mithun PG |

ಮುಂಬೈ: ಸಾವ್ ಧಾನ್ ಇಂಡಿಯಾ ಮತ್ತು ದೇವೋ ಕೆ ದೇವ್ ಮಹಾದೇವ್ ಸೇರಿದಂತೆ ಅನೇಕ ಜನಪ್ರಿಯ ಧಾರವಾಹಿಗಳಲ್ಲಿ ನಟಿಸಿದಂತಹ ಕಲಾವಿದೆ ಪ್ರೀತಿಕಾ ಚೌಹಾಣ್ ಅವರನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

Advertisement

ಮಾದಕ ದ್ರವ್ಯ ವಿತರಣೆ ಮತ್ತು ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೀತಿಕಾ ಚೌಹಾಣ್ ಅವರನ್ನು ಎನ್ ಸಿಬಿ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ  ಬಂಧಿಸಿದ್ದಾರೆ.  ಸದ್ಯ ಆಕೆಯನ್ನು ಕಿಲಾ ಕೋರ್ಟ್ ಮುಂದೆ ಹಾಜರು ಪಡಿಸಲಾಗಿದೆ.

ಮುಂಬೈ ನ ವೆರ್ಸೋವಾದ ಎರಡು ಏರಿಯಾಗಳಲ್ಲಿ ಎನ್ ಸಿಬಿ ಅಧಿಕಾರಿಗಳು ಮಫ್ತಿಯಲ್ಲಿದ್ದರು. ಈ ವೇಳೆ ನಡೆದ ಕಾರ್ಯಾಚರಣೆಯಲ್ಲಿ ಪ್ರೀತಿಕಾ ಚೌಹಾಣ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಜೂನ್ 14 ರಂದು  ಮೃತಪಟ್ಟ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಡ್ರಗ್ಸ್ ನಂಟು ಅಂಟಿಕೊಂಡಿದ್ದು, ಎನ್ ಸಿಬಿ ಅಧಿಕಾರಿಗಳು ಈ ಕುರಿತು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಡ್ರಗ್ಸ್ ಜಾಲದ ಆರೋಪದಲ್ಲಿ ಸಿಲುಕಿ ಜಾಮೀನಿನ ಮೇಲೆ ಹೊರಬಂದಿದ್ದಾರೆ. ರಿಯಾ ಮುಂಬೈನ ಬೈಕುಲ್ಲಾ ಜೈಲಿನಲ್ಲಿ ಸುಮಾರು 28 ದಿನಗಳನ್ನು ಕಳೆದಿದ್ದರು.

Advertisement

ಅನೇಕ ಬಾಲಿವುಡ್ ಸೆಲೆಬ್ರಿಟಿಗಳನ್ನು ಎನ್‌ಸಿಬಿ,  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ್ದು, ಇವರಲ್ಲಿ  ನಟಿಯರಾದ ದೀಪಿಕಾ ಪಡುಕೋಣೆ, ಶಾರದಾ ಕಪೂರ್, ಸಾರಾ ಅಲಿ ಖಾನ್, ರಕುಲ್ ಪ್ರೀತ್ ಸಿಂಗ್ ಕೂಡ ಸೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next