Advertisement

ಕಾರವಾರ: ತಿಂಗಳ ಅವಧಿಯಲ್ಲಿ ನಾಲ್ಕನೇ ಕಡಲಾಮೆಯ ಸಾವು

09:00 PM Sep 09, 2021 | Team Udayavani |

ಕಾರವಾರ: ಇಂದು ಗುರುವಾರ  ಸಂಜೆ ಕಾರವಾರ ರವೀಂದ್ರನಾಥ ಕಡಲತೀರದಲ್ಲಿ ಗ್ರೀನ್ ಟೊರಟೈಜ್ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

Advertisement

ಕಡಲತೀರದಲ್ಲಿ ಗಸ್ತು ತಿರುಗುತ್ತಿದ್ದ ಪೋಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು , ಡಿಸಿಎಫ್ ವಸಂತ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಆರ್‍ಎಫ್ಒ ಪ್ರಮೋದ್ ಅವರು ಸ್ಥಳಕ್ಕೆ ಭೇಟಿ‌ ನೀಡಿ ಗ್ರೀನ್ ಆಮೆಯನ್ನು ವಶಕ್ಕೆ ಪಡೆದು ಪಶುವೈದ್ಯರಿಗೆ ಮರಣೋತ್ತರ ಪರೀಕ್ಷೆ ಗೆ ಒಪ್ಪಿಸಿದ್ದಾರೆ.

ಹೆಣ್ಣಾಮೆ ಇದಾಗಿದ್ದು, ಬಲೆಗೆ ಸಿಕ್ಕಿ ಸತ್ತಿರಬಹುದು ಎಂದು ಶಂಕಿಸಲಾಗಿದೆ. ಗ್ರೀನ್ ಆಮೆ ಅಪರೂಪದ ಜೀವಿ. ಕಾರವಾರ ಕಡಲತೀರದಲ್ಲಿ ಇವು ಹೆಚ್ಚಾಗಿವೆ. ಅಗಸ್ಟ ೧೨ ರಿಂದ ಸೆ.೯ ರ ಅವಧಿಯಲ್ಲಿ ಒಟ್ಟು ನಾಲ್ಕು ಕಡಲಾ‌ಮೆ ಮೃತಪಟ್ಟಿರುವುದು ಕಳವಳಕಾರಿ ಎಂದು ಕಡಲಜೀವಶಾಸ್ತ್ರದ ಪ್ರಾಧ್ಯಾಪಕ ಶಿವಕುಮಾರ್ ಹರಗಿ ಹೇಳಿದ್ದಾರೆ‌. ಆಮೆ ಸಾವಿನ ಬಗ್ಗೆ ಅಗತ್ಯ ಬಿದ್ದರೆ ತನಿಖೆ ಮಾಡಲಾಗುವುದು ಎಂದು ಅರಣ್ಯಾಧಿಕಾರಿ ಪ್ರಮೋದ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next