Advertisement
ಡೆಂಗ್ಯೂ ಹರಡುವ ಸೊಳ್ಳೆ ಸೂರ್ಯ ಉದಯಿಸಿದ 2 ಗಂಟೆಗಳ ತರುವಾಯ ಚಟುವಟಿಕೆ ಆರಂಭಿಸುತ್ತದೆ. ಸೂರ್ಯ ಮುಳುಗುವ ಹಿಂದಿನ ಕೆಲ ಗಂಟೆಗಳ ಕಾಲ ಇವು ಚಟುವಟಿಕೆಯಿಂದಿರುತ್ತವೆ. ಈ ಸಮಯದಲ್ಲಿ ಈ ಸೊಳ್ಳೆಗಳು ಕಚ್ಚುವ ಸಂಭವ ಹೆಚ್ಚಿರುತ್ತದೆ. ಆದರೆ ರಾತ್ರಿ ವೇಳೆ ಸಾಕಷ್ಟು ಬೆಳಕಿರುವ ಪ್ರದೇಶದಲ್ಲೂ ಈ ಸೊಳ್ಳೆಗಳು ಚಟುಟಿಕೆಯಿಂದ ಇದ್ದು, ಜನರಿಂದ ರಕ್ತ ಹೀರುತ್ತದೆ. ಡೆಂಗ್ಯೂ ಸೊಳ್ಳೆ ಹೆಚ್ಚಾಗಿ ನೆಲಮಟ್ಟದಿಂದ ಸ್ವಲ್ಪವೇ ಎತ್ತರದಲ್ಲಿ ಹಾರಾಡುತ್ತವೆ. ಇವು ಕಾಲಿನ ಮಂಡಿಯಿಂದ ಕೆಳಭಾಗವನ್ನು ಕಚ್ಚುತ್ತವೆ. ಮಲೇರಿಯಾ ಕಾರುವ ಏಡಿಸ್ ಈಜಿಪ್ಟಿ ಸೊಳ್ಳೆಗಳು ಹಗಲು ಮತ್ತು ರಾತ್ರಿ ಚಟುವಟಿಕೆಯಿಂದ ಇರುತ್ತವೆ. ಆದ್ದ ರಿಂದ ಇವು ಎಲ್ಲಾ ಸಮಯದಲ್ಲೂ ಆಹಾರ ಸೇವನೆ (ರಕ್ತ ಹೀರು ವಿಕೆ) ಮಾಡುತ್ತವೆ. ಆಹಾರ ಸೇವಿಸಿದ ಬಳಿಕ ಚಟುವಟಿಕೆ ನಿಲ್ಲಿಸಿ ಕತ್ತಲಿನಲ್ಲಿ ನಿಷ್ಕ್ರಿಯ ವಾಗಿ ಕುಳಿತುಬಿಡುತ್ತವೆ ಎಂದಿದೆ ವರದಿ.
Advertisement
ಡೆಂಗ್ಯೂನಿಂದ ಬಚಾವಾಗಲು ಲೈಟ್‌ಗಳನ್ನು ಆಫ್ ಮಾಡಿ!
11:05 AM Sep 03, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.