Advertisement
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಯರಗಟ್ಟಿ ಗ್ರಾಮದ 70 ವರ್ಷದ ರೈತ ಶ್ರೀಕಾಂತ ಘೂಳನ್ನವರ ಮೂಲತಃ ಕೃಷಿಯಿಂದಲೇ ಬದುಕು ಸಾಗಿಸಿದವರು. ಇದೀಗ ತಮ್ಮ ಮೂರುವರೆಷ್ಟು ಎಕರೆ ಪ್ರದೇಶದಲ್ಲಿ ಅರಿಶಿನ ಬೀಜ ಹಾಕಿದ 40 ದಿನಗಳಲ್ಲಿ 4 ಅಡಿ ಎತ್ತರ ಬೆಳೆದು ರೈತರನ್ನೇ ದಿಗ್ಬ್ರಮೆ ಮೂಡಿಸುವಲ್ಲಿ ಕಾರಣರಗಿದ್ದಾರೆ. ಇದಕ್ಕೆ ಹನಿ ನೀರಾವರಿ ವ್ಯವಸ್ಥೆ ಮಾಡಿಕೊಂಡಿದ್ದಾರೆ.
Related Articles
Advertisement
ಒಟ್ಟಾರೆ ವೈಜ್ಞಾನಿಕ ತಳಹದಿಯಲ್ಲಿ ಬೆಳೆ ಬೆಳೆಯುತ್ತಿರುವದರಿಂದ ಬಲು ಸಹಕಾರಿಯಾಗಿದೆ. ಎಕರೆಗೆ ಸಾಮಾನ್ಯವಾಗಿ 30 ಕ್ವಿಂಟಲ್‌ನಷ್ಟು ಅರಿಶಿನ ಉತ್ಪಾದನೆಯಾಗುವದು. ಈ ಬೆಳೆಯು 50 ಕ್ವಿಂಟಲ್ ನಷ್ಟು ಉತ್ಪಾದನೆ ನೀಡುವ ನಿರೀಕ್ಷೆಯಿದೆ ಎನ್ನುತ್ತಾರೆ ರೈತ ಘೂಳನ್ನವರ.
ಮಾಹಿತಿಗೆ : 81233-21606
ಅರಿಷಿಣದ ಹೊಸ ತಳಿಯ ಬೀಜ ಪ್ರಾಯೋಗಿಕವಾಗಿ ಬೆಳೆದಿದ್ದು, ೪೦ ದಿನಗಳಲ್ಲಿ ಇಷ್ಟೊಂದು ಉತ್ತಮ ಬೆಳೆ ಬಂದಿರುವದು ಸಂತಸವೆನಿಸುತ್ತಿದೆ. ಕಡಿಮೆ ಅವಧಿಯಲ್ಲಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದೇನೆ.’-ಶ್ರೀಕಾಂತ ಘೂಳನ್ನವರ, ಅಧ್ಯಕ್ಷ, ರೈತ ಸಂಘ, ರಬಕವಿ-ಬನಹಟ್ಟಿ.