Advertisement
ಟರ್ಕಿ ದೇಶದ ಸೋಶಿಯಲ್ ಮೀಡಿಯಾ ಪ್ರಭಾವಿ ಕುಬ್ರಾ ಆಯ್ಕುತ್ (26) ಟರ್ಕಿಯ ಸುಲ್ತಾನ್‌ಬೇಲಿ ಜಿಲ್ಲೆಯ ಐಷಾರಾಮಿ ಅಪಾರ್ಟ್‌ಮೆಂಟ್ ನ ಕಟ್ಟಡದ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
Related Articles
Advertisement
ತನ್ನ ಟಿಕ್ ಟಾಕ್ ವಿಡಿಯೋಗಳಿಂದ ಅಪಾರ ಫಾಲೋವರ್ಸ್ ಗಳನ್ನು ಹೊಂದಿದ್ದ ಅವರಿಗೆ ಟಿಕ್‌ಟಾಕ್ ಖಾತೆಯಲ್ಲಿ ಒಂದು ಮಿಲಿಯನ್ ಅನುಯಾಯಿಗಳಿದ್ದರು. ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 2,07,000 ಅನುಯಾಯಿಗಳನ್ನು ಹೊಂದಿದ್ದರು.
ಕುಬ್ರಾ 2023 ರಲ್ಲಿ ಟಿಕ್‌ಟಾಕ್‌ನಲ್ಲಿ ತನ್ನ ವಿಶಿಷ್ಟ ಕಂಟೆಂಟ್ ನಿಂದ ಗಮನ ಸೆಳೆದಿದ್ದರು.”ವೆಡ್ಡಿಂಗ್ ವಿತ್ ಔಟ್ ಎ ಗ್ರೂಮ್”(ವರನಿಲ್ಲದೆ ಮದುವೆ) ಸರಣಿಯ ವಿಡಿಯೋಗಳಿಂದ ಖ್ಯಾತಿ ಆಗಿದ್ದರು. ಗಮನಾರ್ಹ ಜನಪ್ರಿಯತೆಯನ್ನು ಗಳಿಸಿದ್ದರು. ಕುಬ್ರಾ ಸಾಂಕೇತಿಕವಾಗಿ ತನ್ನನ್ನು ತಾನೇ ಮದುವೆಯಾಗಿದ್ದರು.