Advertisement
ಕೋವಿಡ್ ಬಿಕ್ಕಟ್ಟಿನ ನಂತರ ಮೊದಲ ಬಾರಿಗೆ, ಬುಧವಾರ ಟರ್ಕಿಯ ಲಿರಾ( ರುಪಾಯಿ) ಡಾಲರ್‌ನ ಎದುರು 7ಲಿರಾ ಅಂಕಗಳಷ್ಟು ಕುಸಿತ ಕಂಡಿದೆ. ಕೇಂದ್ರ ಬ್ಯಾಂಕ್‌ಗಳು 2 ಬಾರಿ ದರ ಕಡಿತವನ್ನು ಮಾಡಿಯೂ ಕರೆನ್ಸಿ ಮೌಲ್ಯ ಪತನಗೊಂಡಿರುವುದು ನಕರಾತ್ಮಕ ಬೆಳವಣಿಗೆ ಯನ್ನು ಸೂಚಿಸುತ್ತಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಪರಿಸ್ಥಿತಿ ಹೀಗೆ ಮುಂದುವರಿದರೆ ಸರಕಾರದ ಮೂಲಕ ಪಡೆದ ಉಳಿಕೆ ಸಾಲ ಮೊತ್ತವನ್ನು ಹಿಂದಿರುಗಿಸುವಲ್ಲಿ ವ್ಯಾಪಾರಿಗಳು ವಿಫಲರಾಗಲಿದ್ದು, ಇದು ನೇರವಾಗಿ ಕೇಂದ್ರ ಬ್ಯಾಂಕ್‌ಗಳ ನಿವ್ವಳ ಆದಾಯದ ಮೇಲೆ ಪರಿಣಾಮ ಬೀರಲಿದೆ. ಈಗಾಗಲೇ ಕಳೆದ ವಾರ ಕೇಂದ್ರ ಬ್ಯಾಂಕಿನ ನಿವ್ವಳ ಮೊತ್ತ ಪ್ರಮಾಣ 26 ಬಿಲಿಯನ್ ನಷ್ಟು ಕಡಿಮೆಯಾಗಿದ್ದು, ವರ್ಷದ ಪ್ರಾರಂಭದಲ್ಲಿ ಇದರ ಪ್ರಮಾಣ 40 ಬಿಲಿಯನ್‌ಗಿಂತ ಹೆಚ್ಚಿತ್ತು ಎನ್ನಲಾಗಿದೆ. ಹೀಗಾಗಿ ಈ ಬೆಳವಣಿಗೆ ಚಿಂತೆಗೀಡು ಮಾಡಿದೆ. ಹೆಚ್ಚಿದ ವೆಚ್ಚದ ಪ್ರಮಾಣ
ಕೋವಿಡ್-19ನ ಅಬ್ಬರಕ್ಕೆ ಟರ್ಕಿ ಆರ್ಥಿಕತೆ ಕೇವಲ ವೆಚ್ಚಗಳಿಂದಲೇ ಸುತ್ತವರೆದಿದ್ದು, ವಿದೇಶಿ ಧನ ಸಹಾಯ ಮೂಲಗಳಿಂದ ನೆರವು ಪಡೆಯಲು ಅಸಮರ್ಥವಾಗಿದೆ. ಅಲ್ಲದೇ ಈಗಾಗಲೇ ಟರ್ಕಿಯ ತಲೆ ಮೇಲೆ ಸುಮಾರು 170 ಬಿಲಿಯನ್‌ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಬಾಹ್ಯ ಸಾಲದ ಹೊರೆ ಬಿದ್ದಿದೆ. ಈ ಎಲ್ಲ ಅಂಶಗಳು ದೇಶದ ಅರ್ಥ ವ್ಯವಸ್ಥೆಯನ್ನು ಮತ್ತಷ್ಟು ಹದೆಗೆಡುವಂತೆ ಮಾಡಿದೆ.
Related Articles
ಯುರೋಪ್ ದೇಶದ ವಾಹನ ಮತ್ತು ಜವಳಿ ಕಾರ್ಖಾನೆಗಳಿಗೆ ನೀಡಿದ ಕಾರ್ಯಾದೇಶಗಳನ್ನು ರದ್ದು ಮಾಡಿದ್ದು, ಸರಕುಗಳ ರಪ್ಪು ಅನ್ನು ನಿಲ್ಲಿಸಿದೆ. ಈ ಪರಿಣಾಮವಾಗಿ ಕೈಗಾರಿಕಾ ಘಟಕಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ ಎಂದು ಕೈಗಾರಿಕಾ ಮತ್ತು ತಂತ್ರಜ್ಞಾನ ಸಚಿವ ಮುಸ್ತಫಾ ವರಾಂಕ್ ಹೇಳಿದ್ದರು.
Advertisement
ಈ ಹಿನ್ನೆಲೆಯಲ್ಲಿ ದೇಶದ ವ್ಯಾಪಾರಸ್ಥರು ಸೇರಿದಂತೆ ಇತರೆ ಉತ್ಪಾದನ ಘಟಕಗಳ ಮಾಲಕರಲ್ಲಿ, ಅಧಿಕಾರಿಗಳು ಆತ್ಮವಿಶ್ವಾಸದ ಕೊರತೆಯನ್ನು ಅನುಭವಿಸುತ್ತಿದ್ದು, ಏಪ್ರಿಲ್ ತಿಂಗಳಲ್ಲಿ ಆರ್ಥಿಕತೆಯ ಕುರಿತಾಗಿನ ಆತ್ಮವಿಶ್ವಾಸದ ಮಟ್ಟ ಶೇ. 66.8ಕ್ಕೆ ಕುಸಿದಿದೆ. ಒಂದು ತಿಂಗಳ ಹಿಂದೆ ಇದರ ಪ್ರಮಾಣ ಶೇ.99.7ರಷ್ಟಿತ್ತು ಎಂದು ಕೇಂದ್ರ ಬ್ಯಾಂಕ್ ಅಭಿ ಪ್ರಾಯಪಟ್ಟಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ಜರ್ಮನಿ ಸೇರಿದಂತೆ ಹಲವು ದೇಶಗಳು ಆರ್ಥಿಕ ಸಂಕಷ್ಟದ ಭೀತಿಯಲ್ಲಿ ಮುಳುಗಿವೆ. ಹೆಚ್ಚುತ್ತಿರುವ ನಿರುದ್ಯೋಗವನ್ನು ತಡೆಯಲೂ ಹಲವಾರು ಕಸರತ್ತು ಮಾಡುತ್ತಿದ್ದು, ಯುರೋಪಿಯನ್ ಒಕ್ಕೂಟ ಇದಕ್ಕೆಂದೇ ವಿಶೇಷ ನಿಧಿಯನ್ನೂ ಸ್ಥಾಪಿಸಿದೆ.